Download in PDF Format :

ಸುಮಾರು ಐದು ಸಾವಿರ ವರ್ಷಗಳ ಹಿಂದೆ, ದ್ವಾಪರದ ಕೊನೆಯಲ್ಲಿ, ವೇದಗಳನ್ನು ವಿಂಗಡಿಸಿ ಬಳಕೆಗೆ ತಂದ ಮಹರ್ಷಿ ವೇದವ್ಯಾಸರೇ ಅವುಗಳ ಅರ್ಥವನ್ನು ತಿಳಿಯಾಗಿ ವಿವರಿಸಲು ಹದಿನೆಂಟು ಪುರಾಣಗಳನ್ನು ರಚಿಸಿದರು. ಈ ಪುರಾಣಗಳಲ್ಲಿ ಹೆಚ್ಚು ಪ್ರಸಿದ್ಧವಾದುದು ಹಾಗೂ ಪುರಾಣಗಳ ರಾಜ ಎನ್ನಬಹುದಾದ ಮಹಾಪುರಾಣ ಭಾಗವತ.
ಸಾವು ಎನ್ನುವ ಹಾವು ಬಾಯಿ ತೆರೆದು ನಿಂತಿದೆ. ಜಗತ್ತಿನ ಎಲ್ಲಾ ಜೀವಜಾತಗಳು ಅಸಾಯಕವಾಗಿ ಅದರ ಬಾಯಿಯೊಳಗೆ ಸಾಗುತ್ತಿವೆ. ಈ ಹಾವಿನಿಂದ ಪಾರಾಗುವ ಉಪಾಯ ಉಂಟೇ? ಉಂಟು, ಶುಕಮುನಿ ನುಡಿದ ಶ್ರೀಮದ್ಭಾಗವತವೇ ಅಂಥಹ ದಿವ್ಯೌಷಧ. ಜ್ಞಾನ-ಭಕ್ತಿ ವಿರಳವಾಗಿರುವ ಕಲಿಯುಗದಲ್ಲಂತೂ ಇದು ತೀರಾ ಅವಶ್ಯವಾದ ದಾರಿದೀಪ.
ಇಲ್ಲಿ ಅನೇಕ ಕಥೆಗಳಿವೆ. ಆದರೆ ನಮಗೆ ಕಥೆಗಳಿಗಿಂತ ಅದರ ಹಿಂದಿರುವ ಸಂದೇಶ ಮುಖ್ಯ. ಒಂದು ತತ್ತ್ವದ ಸಂದೇಶಕ್ಕಾಗಿ ಒಂದು ಕಥೆ ಹೊರತು, ಅದನ್ನು ವಾಸ್ತವವಾಗಿ ನಡೆದ ಘಟನೆ ಎಂದು ತಿಳಿಯಬೇಕಾಗಿಲ್ಲ.
ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧ. ಮನಸ್ಸು ಮಲೀನವಾದರೆ ಮೈತೊಳೆದು ಏನು ಉಪಯೋಗ? ನಮ್ಮ ಮನಸ್ಸನ್ನು ತೊಳೆದು ಶುದ್ಧ ಮಾಡುವ ಸಾಧನ ಈ ಭಾಗವತ. ಶ್ರದ್ಧೆಯಿಂದ ಭಾಗವತ ಓದಿದರೆ ಮನಸ್ಸು ಪರಿಶುದ್ಧವಾಗಿ ಭಗವಂತನ ಚಿಂತನೆಗೆ ತೊಡಗುತ್ತದೆ. ಬಿಡುಗಡೆಯ ದಾರಿಯನ್ನು ತೆರೆದು ತೋರಿಸುತ್ತದೆ.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಭಾಗವತ ಪ್ರವಚನದಲ್ಲಿ ಒಬ್ಬ ಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸಿದ ಭಾಗವತದ ಅರ್ಥಸಾರವನ್ನು ಇ-ಪುಸ್ತಕ ರೂಪದಲ್ಲಿ ಸೆರೆ ಹಿಡಿದು ಆಸಕ್ತ ಭಕ್ತರಿಗೆ ತಲುಪಿಸುವ ಒಂದು ಕಿರುಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತಿದೆ. ಚಿತ್ರಕೃಪೆ: ಅಂತರ್ಜಾಲ.
Download in PDF Format :
Skandha-01:All 20 Chapters e-Book
Skandha-02 All 10 chapters e-Book

Note: due to unavoidable reason we are unable to publish regular posts. But we will come back soon.......

Saturday, February 20, 2016

Shrimad BhAgavata in Kannada -Skandha-03-Ch-03(2)

ರುಗ್ಮಿಣಿ ವಿವಾಹದ ನಂತರ ಶ್ರೀಕೃಷ್ಣ ಷಣ್ಮಹಿಷಿಯರನ್ನು ವರಿಸುತ್ತಾನೆ. (ನೀಳಾ, ಭದ್ರಾ, ಮಿತ್ರವಿಂದಾ, ಕಾಳಿಂದೀಲಕ್ಷಣಾ ಮತ್ತು ಜಾಂಬವತೀ ಇವರು ಷಣ್ಮಹಿಷಿಯರು). ಈ ಹಿಂದೆ ಎರಡನೇ ಸ್ಕಂಧದಲ್ಲಿ ಹೇಳಿರುವಂತೆ: ನಗ್ನಜಿತ್ ರಾಜನ ಮಗಳು ನೀಳಾ ಷಣ್ಮಹಿಷಿಯರಲ್ಲಿ ಒಬ್ಬಳು.  ಬಾಲ್ಯದಲ್ಲಿ ಕೃಷ್ಣನ ಸ್ನೇಹಿತೆಯಾಗಿರುವ  ಇನ್ನೊಬ್ಬಳು ನೀಳಾಳನ್ನೂ ನಾವು ಕಾಣುತ್ತೇವೆ. ಅವಳು ಯಶೋದೆಯ ಅಣ್ಣನ ಮಗಳು. ಈ ಇಬ್ಬರೂ ಮೂಲತಃ ಒಂದೇ ಸ್ವರೂಪ. ಬಾಲ್ಯದಲ್ಲಿ ಕೃಷ್ಣನನ್ನು ಪ್ರೀತಿಸುವುದಕ್ಕಾಗಿ ಆಕೆ ಇಲ್ಲಿ ನೀಳಾಳಾಗಿ ಹುಟ್ಟಿದರೆಅಲ್ಲಿ ಸ್ವಯಂವರದ ವಧುವಾಗುವ ಭಾಗ್ಯಕ್ಕಾಗಿ ಇನ್ನೊಂದು ರೂಪದಲ್ಲಿ ಹುಟ್ಟಿದ್ದಳು. ಕೊನೆಗೆ ಬಾಲ್ಯದ ನೀಳಾ ಸ್ವಯಂವರದ ವಧು ನೀಳಾಳಲ್ಲಿ ಐಕ್ಯಹೊಂದಿದಳು ಎನ್ನುತ್ತಾರೆ ಶಾಸ್ತ್ರಕಾರರು. ಸಾಮಾನ್ಯವಾಗಿ ಉತ್ತರಭಾರತದವರು ‘ರಾಧೆ’ ಎನ್ನುವ ಹೆಸರನ್ನು ನೀಳಾಳಿಗೆ ಬಳಸುತ್ತಾರೆ. ಆದರೆ ಆಚಾರ್ಯತ್ರಯರು ‘ರಾಧಾ’ ಶಬ್ದವನ್ನು ಎಲ್ಲಿಯೂ ಬಳಸಿಲ್ಲ. ಭಾಗವತದಲ್ಲೂ ಈ ಹೆಸರು ಬಂದಿಲ್ಲ.
ರುಗ್ಮಿಣಿ-ಸತ್ಯಭಾಮೆಯರು ಶ್ರೀಕೃಷ್ಣನ ಮಹಾಮಹಿಷಿಯರಾದರೆ, ಮೇಲೆ ಹೇಳಿದ ಆರುಮಂದಿ ಆತನ ಮಹಿಷಿಯರಾಗಿದ್ದರು. ಶ್ರೀಕೃಷ್ಣ ಸತ್ಯಭಾಮೆಯನ್ನು ಮದುವೆಯಾದ ಮೇಲೆ ಆಕೆಯನ್ನು ದೇವಲೋಕಕ್ಕೆ ಕರೆದುಕೊಂಡು ಹೋಗಿ, ಅಲ್ಲಿನ ಪಾರಿಜಾತ ವೃಕ್ಷವನ್ನು ದ್ವಾರಕೆಗೆ ತರುತ್ತಾನೆ. ನಂತರ ನರಕಾಸುರನನ್ನು ಕೊಂದು ಆತನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರದ ನೂರು ಮಂದಿ ರಾಜಕುಮಾರಿಯರನ್ನು ಬಿಡುಗಡೆಗೊಳಿಸುತ್ತಾನೆ ಶ್ರೀಕೃಷ್ಣ. ಆದರೆ ಆ ರಾಜಕುಮಾರಿಯರು ಸಮಾಜದಲ್ಲಿ ತಮಗೆ ಯಾವ ಸ್ಥಾನಮಾನವೂ ಸಿಗಲಾರದು ಮತ್ತು ನರಕಾಸುರನ ಸೆರೆಮನೆಯಲ್ಲಿದ್ದ ತಮ್ಮನ್ನು ಯಾರೂ ಮದುವೆಯಾಗಲಾರರು ಎನ್ನುವ ಆತಂಕ ವ್ಯಕ್ತಪಡಿಸಿ ತಮ್ಮ ದೇಶಕ್ಕೆ ಹಿಂದಿರುಗಲು ಒಪ್ಪದೇ ಇದ್ದಾಗ, ಶ್ರೀಕೃಷ್ಣ  ಅವರಿಗೆ ತನ್ನ ಪಟ್ಟದರಸಿಯರ ಸ್ಥಾನ ಕಲ್ಪಿಸಿ ಕಾಪಾಡುತ್ತಾನೆ.

ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ
ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

ಶ್ರೀಕೃಷ್ಣ ೧೬,೧೦೦ ಮಂದಿ ರಾಜಕುಮಾರಿಯರನ್ನು ಮದುವೆಯಾಗಿದ್ದಷ್ಟೇ ಅಲ್ಲ, ಅವರೆಲ್ಲರಿಗೂ ವಾಸಮಾಡಲು ಪ್ರತ್ಯೇಕ ಮನೆಯನ್ನು ಮಾಡಿಸಿ ಕೊಟ್ಟಿದ್ದ. ದಶಮ ಸ್ಕಂಧದಲ್ಲಿ ಹೇಳುವಂತೆ: ಶ್ರೀಕೃಷ್ಣ ಇಷ್ಟೊಂದು ಮಂದಿ ಪತ್ನಿಯರ ಜೊತೆ ಹೇಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲದಿಂದ ನಾರದರು ಪ್ರತಿಯೊಂದು ಮನೆಗೂ ಭೇಟಿ ಕೊಟ್ಟು ನೋಡಿದರೆ, ಅವರಿಗೆ ಅಲ್ಲಿ ಎಲ್ಲಾ  ಮನೆಗಳಲ್ಲೂ ಶ್ರೀಕೃಷ್ಣನಿರುವುದು ಕಂಡು ಆಶ್ಚರ್ಯವಾಗುತ್ತದೆ. ಈ ರೀತಿ ಶ್ರೀಕೃಷ್ಣ ತಾನೂ ಕೂಡಾ ೧೬,೧೦೦ ರೂಪದಿಂದ ಇದ್ದು, ಎಲ್ಲರನ್ನು ಸಂತೋಷವಾಗಿರಿಸಿ, ಪ್ರತಿಯೊಬ್ಬರಿಗೂ ತನ್ನಂತೆ ಇರುವ ಹತ್ತು-ಹತ್ತು ಮಂದಿ ಮಕ್ಕಳನ್ನು ಕರುಣಿಸುತ್ತಾನೆ.
ಈ ಮೇಲಿನ ಶ್ಲೋಕದಲ್ಲಿ “ತನಗೆ ಸದೃಶರಾದ ಮಕ್ಕಳನ್ನು ಶ್ರೀಕೃಷ್ಣ ನೀಡಿದ” ಎಂದು ಹೇಳಲಾಗಿದೆ. ಮೇಲ್ನೋಟಕ್ಕೆ “ಶ್ರೀಕೃಷ್ಣನಿಗೆ ಸಮನಾದ ಮಕ್ಕಳನ್ನು ಅವರೆಲ್ಲರೂ ಪಡೆದರು” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಭಗವಂತನಿಗೆ ಸಮನಾದ ಇನ್ನೊಂದು ಜೀವವಿಲ್ಲ. ಈ ಮಾತಿನ ಒಳಾರ್ಥವನ್ನು ಆಚಾರ್ಯ ಮಧ್ವರು ಅಗ್ನಿಪುರಾಣದ ಪ್ರಮಾಣ ಸಹಿತ ವಿವರಿಸಿ ಹೇಳಿದ್ದಾರೆ. ಅಗ್ನಿಪುರಾಣದಲ್ಲಿ  ಹೇಳುವಂತೆ:  ಉತ್ತಮೈಃ ಸರ್ವತಃ ಸಾಮ್ಯಂ ಕಿಞ್ಚಿತ್ ಸಾಮ್ಯಮುದೀರ್ಯತೇ | ಆ ಮಕ್ಕಳೆಲ್ಲರೂ ಶ್ರೀಕೃಷ್ಣನ ಮಕ್ಕಳಾಗಲು ಯೋಗ್ಯರಾದ ದೈವಾಂಶ ಸಂಭೂತರಾಗಿದ್ದರು. ಪ್ರಕೃತಿಯ ವೈಭವಕ್ಕಾಗಿ, ದೇವಲೋಕದ  ವೈಭವವನ್ನು ಶ್ರೀಕೃಷ್ಣ ಭೂಮಿಯ ಮೇಲೆ ತೋರಿಸಿದ.  ಶ್ರೀಲಕ್ಷ್ಮಿ ಕೂಡಾ ಶ್ರೀ-ಭೂ-ದುರ್ಗಾ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದಳು. ಈ ರೀತಿ ಭೂಮಿ ದೇವತೆಗಳ ನಾಡಾಗಿ ಕಂಗೊಳಿಸಿತು. [ದೇವತೆಗಳ ವೈಭವವನ್ನು ಭೂಮಿಯಲ್ಲಿ ತೋರಿಸಲು ಶ್ರೀಕೃಷ್ಣ ಅಷ್ಟು ಮಕ್ಕಳನ್ನು ಕರುಣಿಸಿದ. ಆದರೆ “ಆ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದ ಮೂಢರು ಕೃಷ್ಣನನ್ನು ಹೆಣ್ಣು ಮರುಳ ಎಂದು ತಿಳಿದರು” ಎನ್ನುವ ನೋವಿನ ಧ್ವನಿ ಉದ್ಧವನ ಮಾತಿನಲ್ಲಿದೆ].
ಶ್ರೀಕೃಷ್ಣನ ಮಹಿಮೆಯನ್ನು ಹೇಳುತ್ತಾ ಉದ್ಧವ: ಶಿಶುಪಾಲ, ದಂತವಕ್ರ ಮತ್ತು ಜರಾಸಂಧನಂತಹ ದೈತ್ಯರ ಸಂಹಾರವನ್ನು, ಭೀಮ-ಅರ್ಜುನರನ್ನು ಮಾಧ್ಯಮವಾಗಿ ಬಳಸಿ ಹದಿನೆಂಟು ಅಕ್ಷೋಹಿಣಿ ಸೇನೆಯ ಆಯಸ್ಸನ್ನು ಶ್ರೀಕೃಷ್ಣ ತನ್ನ ಕಣ್ಣಿನಿಂದ ಹೀರಿ ಸಂಹಾರ ಮಾಡಿದ ಘಟನೆಗಳನ್ನು, ಪಾಂಡವರ ಸಂತತಿಯಾದ ಪರೀಕ್ಷಿತನನ್ನು  ಗರ್ಭದಲ್ಲಿ ನಿಂತು ರಕ್ಷಿಸಿದ ಆತನ ಮಹಿಮೆಯನ್ನು ಜ್ಞಾಪಿಸಿಕೊಳ್ಳುತ್ತಾನೆ. 

Sunday, February 14, 2016

Shrimad BhAgavata in Kannada -Skandha-03-Ch-03(1)

ತೃತೀಯೋSಧ್ಯಾಯಃ

ಉದ್ಧವ ಉವಾಚ
ಸಮಾಹುತಾ ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್
ಗಾಂಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ಸುಪರ್ಣಃ ॥೦೩॥

ವಿದುರನಿಗೆ ಶ್ರೀಕೃಷ್ಣನ ಅವತಾರದ ಲೀಲೆಗಳನ್ನು ವಿವರಿಸುತ್ತಿರುವ ಉದ್ಧವ ಇಲ್ಲಿ ರುಗ್ಮಿಣಿ ಸ್ವಯಂವರದ ಕುರಿತು ಹೇಳುತ್ತಾನೆ. ಭೀಷ್ಮಕ ರಾಜನ ಮಗಳು ರುಗ್ಮಿಣಿ [ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ*]. ರುಗ್ಮಿಣಿಯನ್ನು ‘ಭ್ಯಷ್ಮೀ’ ಎಂದೂ ಕರೆಯುತ್ತಾರೆ. ಭೀಷ್ಮಕ ರಾಜ ತನ್ನ ಮಗಳ ಸ್ವಯಂವರ ಏರ್ಪಡಿಸಿ, ಅದರ ನಿಮಿತ್ತ ಎಲ್ಲಾ ಕ್ಷತ್ರಿಯರಿಗೂ ಆಹ್ವಾನವನ್ನು ಕಳುಹಿಸಿದ್ದ. ಈ ಸಂದರ್ಭದಲ್ಲಿ ರುಗ್ಮಿಣಿಯ ಅಣ್ಣ ರುಗ್ಮ  ಜರಾಸಂಧನ ನೇತ್ರತ್ವದಲ್ಲಿ  ರುಗ್ಮಿಣಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಶಿಶುಪಾಲನಿಗೆ ಮದುವೆ ಮಾಡಿಸುವ ಪಿತೂರಿ ಮಾಡಿದ್ದ. ಈ ಕಾರಣದಿಂದ ರುಗ್ಮಿಣಿ ಪ್ರೀತಿಸುತ್ತಿದ್ದ ಶ್ರೀಕೃಷ್ಣನನ್ನು ಅವರು ಸ್ವಯಂವರಕ್ಕೆ ಆಹ್ವಾನ ಮಾಡಿರಲಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ಆಹ್ವಾನವಿಲ್ಲದೇ ಶ್ರೀಕೃಷ್ಣ ಬಂದರೂ ಕೂಡಾ, ಆತನಿಗೆ ಅಲ್ಲಿ ಯಾವುದೇ ಆಸನವಿರದಂತೆ ವ್ಯವಸ್ಥೆ ಮಾಡಲಾಗಿತ್ತು. ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳಿದಂತೆ: ಭೀಷ್ಮಕಕನ್ಯಾಯಾ ಅರ್ಥೇ ಸವರ್ಣಮಾತ್ರತಯಾ ಆಹೂತಾಃ | ಏಷಾಂ ಶ್ರಿಯೋ ಜಿಹೀರ್ಷಯಾಽಽಹ್ವಾನಬುದ್ಧಿರ್ಭಗವತಾ ಕೃತಾ |  ಅಲ್ಲಿ ಸೇರಲಿದ್ದವರು ಕೇವಲ  ಕ್ಷತ್ರಿಯರಾಗಿದ್ದುದರಿಂದ  ಆಹ್ವಾನಿತರಾಗಿದ್ದರೇ ಹೊರತು, ರುಗ್ಮಿಣಿಯನ್ನು ವರಿಸಲು ಯೋಗ್ಯರು ಎಂದಲ್ಲ. ಅಂತಹ ಕ್ಷತ್ರಿಯರ ಅಹಂಕಾರವನ್ನು ಮುರಿಯುವ ಇಚ್ಛೆಯಿಂದ ಅವರನ್ನು ಆಹ್ವಾನಿಸಲು ಭೀಷ್ಮಕನಿಗೆ ಭಗವಂತನೇ ಪ್ರೇರಣೆ ನೀಡಿದ್ದ.   
ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಮದುವೆಯ ತಯಾರಿ ನಡೆದಿರುವುದು ರುಗ್ಮಿಣಿಗೆ ಗೊತ್ತಿತ್ತು. ಆಕೆ ತಾನು ಪ್ರೀತಿಸಿದ ಶ್ರೀಕೃಷ್ಣನಿಗೆ ಪತ್ರ ಬರೆದು:  “ನಾನು ನಿನ್ನನ್ನು ಬಯಸಿದವಳು. ಆದರೆ ನನ್ನನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸುವ ತಯಾರಿ ನಡೆಸಲಾಗಿದೆ. ನೀನು ಬಂದು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕು. ನೀನು ಬರಲಿಲ್ಲ ಎಂದರೆ ನಾನು ದೇಹತ್ಯಾಗ ಮಾಡುತ್ತೇನೆ ಹೊರತು,  ಆ ನರಿಯನ್ನು(ಶಿಶುಪಾಲನನ್ನು) ಮದುವೆಯಾಗಲಾರೆ” ಎಂದು ತಿಳಿಸಿದ್ದಳು.  
ಸ್ವಯಂವರದ ವ್ಯವಸ್ಥೆ, ಅದರ ಹಿಂದಿನ ಪಿತೂರಿಯನ್ನು ತಿಳಿದಿದ್ದ ಶ್ರೀಕೃಷ್ಣ, ಸ್ವಯಂವರ ಮಂಟಪಕ್ಕೆ ಬರಲಿಲ್ಲ. ಮದುವೆಗೆ ಮೊದಲು ಕನ್ಯೆ ದೇವಸ್ಥಾನಕ್ಕೆ ಬರುವ ಕಾರ್ಯಕ್ರಮವಿದ್ದು, ಆ ಸಮಯದಲ್ಲಿ ಶ್ರೀಕೃಷ್ಣ ಉದ್ಯಾನವನದಲ್ಲಿ ರುಗ್ಮಿಣಿಯನ್ನು ಗಾಂಧರ್ವ ರೀತಿಯಲ್ಲಿ ಮದುವೆಯಾಗಿ, ಆಕೆಯನ್ನು  ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಕರೆದುಕೊಂಡು ಹೋಗುತ್ತಾನೆ. ಈ ವಿಷಯ ತಡವಾಗಿ ಸ್ವಯಂವರ ಮಂಟಪದಲ್ಲಿ ಸೇರಿದ್ದ ಕ್ಷತ್ರಿಯರಿಗೆ ತಿಳಿಯುತ್ತದೆ. ಅವರು ಶ್ರೀಕೃಷ್ಣನ ಬೆನ್ನು ಹತ್ತುತ್ತಾರೆ. ಕೃಷ್ಣ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಸೋಲಿಸಿ, ಅವರ ತಲೆಯ ಮೇಲೆ ಕಾಲಿಟ್ಟು ತನ್ನ ಪತ್ನಿಯಾದ ರುಗ್ಮಿಣಿಯನ್ನು ಕರೆದುಕೊಂಡು ಹೋಗುತ್ತಾನೆ.         
ಈ ಶ್ಲೋಕದಲ್ಲಿ  ಶ್ರೀಕೃಷ್ಣನನ್ನು ಸುಪರ್ಣಃ ಎಂದು ಸಂಬೋಧಿಸಿದ್ದಾರೆ. ಪದ್ಮಪುರಾಣದಲ್ಲಿ ಹೇಳುವಂತೆ: ಸುಪರ್ಣಃ ಸುಪರಾನನ್ದಾತ್ ಕಾಕುತ್ಸ್ಥೋ ವಾಚಿ ಸಂಸ್ಥಿತೇ. ಸದಾ ಆನಂದಸ್ವರೂಪನಾದ ಶ್ರೀಕೃಷ್ಣ ‘ಸುಪರ್ಣಃ’. ಯಾರು ಸುಪರ್ಣನೋ ಆತನೇ ‘ಕಾಕುತ್ಸ್ಥ’. ಶ್ರೀರಾಮಚಂದ್ರನನ್ನು  ಕಾಕುತ್ಸ್ಥ ಎಂದು ಕರೆಯುತ್ತಾರೆ.  ಸರ್ವಶಬ್ದವಾಚ್ಯನಾದ ಭಗವಂತ ಕಾಕುತ್ಸ್ಥ.
[*ಮೇಲೆ ಹೇಳಿದಂತೆ ರುಕ್ಮಿಣಿ ಎನ್ನುವುದು ಅಪಶಬ್ದ. ಸರಿಯಾದ ಶಬ್ದ ರುಗ್ಮಿಣಿ. ಚಿನ್ನ ಎನ್ನುವ ಅರ್ಥದಲ್ಲಿ ‘ರುಕ್ಮ’ ಎನ್ನುವ ಪದ ಈಗ ಬಳಕೆಯಲ್ಲಿದೆ. ಇದರಿಂದ ರುಕ್ಮಿ, ರುಕ್ಮಿಣಿ, ರುಕ್ಮವತಿ, ರುಕ್ಮಾಂಗದ, ಇಂತಹ ಅನೇಕ ಹೆಸರುಗಳು ಪ್ರಸಿದ್ಧವಾಗಿವೆ. ಆದರೆ ಪ್ರಾಚೀನರು ರುಕ್ಮದ ಬದಲು ‘ರುಗ್ಮ‘ ಎನ್ನುತ್ತಿದ್ದರು ಎನ್ನುವುದಕ್ಕೆ ಅನೇಕ ಪುರಾವೆಗಳಿವೆ. ಪ್ರಾಚೀನ ಪುರಾಣಗಳ ಪಾಠದಂತೆ ಭೀಷ್ಮಕನ ಮಗ  ‘ರುಕ್ಮಿ’ ಅಲ್ಲ, ರುಗ್ಮಿ. ಮಗಳು ರುಕ್ಮಿಣಿ ಅಲ್ಲ, ರುಗ್ಮಿಣಿ.  ಇದು ‘ರುಜ’ಧಾತುವಿನಿಂದ ಬಂದ ಪದ. ರುಜಧಾತು ದೈಹಿಕವಾಗಿ ಮಾನಸಿಕವಾಗಿ ನೆಮ್ಮದಿ ಕೆಡಿಸುವುದು ಎನ್ನುವ ಅರ್ಥವನ್ನು ಕೊಡುತ್ತದೆ. ಬಂಗಾರ ಎಂದರೆ ಹಾಗೆಯೇ. ನೆಮ್ಮದಿ ಕೆಡಿಸುವ ಸಂಗತಿಗಳಲ್ಲಿ ಅದಕ್ಕೆ ಮೊದಲ ಮಣೆ. ಇದ್ದರೂ ಚಿಂತೆ, ಇರದಿದ್ದರೂ ಚಿಂತೆ! ಅಣ್ಣ-ತಮ್ಮಂದಿರರಲ್ಲಿ, ಬಂಧು-ಬಳಗದಲ್ಲಿ ಮನಸ್ತಾಪ; ಮನೆ ಒಡೆದು ಪಾಲುಪಟ್ಟಿ; ಇದಕ್ಕೆಲ್ಲವೂ ಬಂಗಾರ ಕಾರಣವಾಗುತ್ತದೆ. ರುಜೋ ಭಂಗೇ ! ರುಜತೀತಿ ರುಗ್ಮಮ್.

ರುಗ್ಮಿಣಿ ಎಂದರೆ ಬಂಗಾರ ಉಳ್ಳವಳು ಎಂದರ್ಥ. ಆದರೆ ಈಕೆಯ ಬಂಗಾರ ಲೋಹವಲ್ಲ, ಭಗವಂತ. ಜ್ಞಾನಾನಂದಮಯನಾದ ಭಗವಂತನನ್ನೇ ಬಂಗಾರವಾಗಿ ಕಂಡ ಭೀಷ್ಮಕನ ಮಗಳು ‘ರುಗ್ಮಿಣಿ’]  
http://bhagavatainkannada.blogspot.in/

Saturday, February 13, 2016

Shrimad BhAgavata in Kannada (Shloka) Skandha-03 Chapter-03

ಅಥ ತೃತೀಯೋSಧ್ಯಾಯಃ


 ಉದ್ಧವ ಉವಾಚ
 ತತಃ ಸ ಆಗತ್ಯ ಪುರಂ ಸ್ವಪಿತ್ರೋಶ್ಚಿಕೀರ್ಷಯಾಽಽಶಾಂ ಬಲದೇವಸಂಯುತಃ
 ನಿಪಾತ್ಯ ತುಂಗಾದ್ ರಿಪುಯೂಥನಾಥಂ ಹತಂ ವ್ಯಕರ್ಷದ್ ವ್ಯಸುಮೋಜಸೋರ್ವ್ಯಾಮ್ ॥೦೧॥

ಸಾಂದೀಪನೇಃ ಸಕೃತ್ ಪ್ರೊಕ್ತಂ ಬ್ರಹ್ಮಾಧೀತ್ಯ ಸವಿಸ್ತರಮ್
ತಸ್ಮೈ ಪ್ರಾದಾದ್ ವರಂ ಪುತ್ರಂ ಮೃತಂ ಪಂಚಜನೋದರಾತ್ ॥೦೨॥

ಸಮಾಹುತಾ ಭೀಷ್ಮಕಕನ್ಯಯಾ ಯೇ ಶ್ರಿಯಃ ಸವರ್ಣೇನ ಜಿಹೀರ್ಷಯೈಷಾಮ್
ಗಾಂಧರ್ವವೃತ್ತ್ಯಾ ಮಿಷತಾಂ ಸ್ವಭಾಗಂ ಜಹ್ರೇ ಪದಂ ಮೂರ್ಧ್ನಿ ದಧತ್ಸುಪರ್ಣಃ ॥೦೩॥

 ಕಕುದ್ಮತೋಽವಿದ್ಧನಸೋ ದಮಿತ್ವಾ ಸ್ವಯಂವರೇ ನಾಗ್ನಜಿತೀಮುವಾಹ
ತಾನ್ ಭಗ್ನಮಾನಾನಭಿಗೃಧ್ಯತೋಽಜ್ಞಾಂಜಘ್ನೇಽಕ್ಷತಃ ಶಸ್ತ್ರಭೃತಶ್ಚ ಶಸ್ತ್ರೈಃ ॥೦೪॥

ಪ್ರಿಯಂ ಪ್ರಭುರ್ಗ್ರಾಮ್ಯ ಇವ ಪ್ರಿಯಾಯಾ ವಿಧಿತ್ಸುರಾರ್ಚ್ಛದ್ದ್ಯುತರುಂ ಯದರ್ಥೇ
ವಜ್ರ್ಯಾದ್ರವತ್ತಂ ಸಗಣೋ ರುಷಾಂಧಃ ಸ್ವಾರ್ಥೇ ಪುರಾ ತೈರ್ಯಮಯಾಚತಾನತಃ ॥೦೫॥

 ಸುತಂ ಮೃಧೇ ಖಂ ವಪುಷಾ ಗ್ರಸಂತಂ ದೃಷ್ಟ್ವಾ ಸುನಾಭೋನ್ಮಥಿತಂ ಧರಿತ್ರ್ಯಾ
 ಆಮಂತ್ರಿತಸ್ತತ್ತನಯಾಯ ಶೇಷಂ ದತ್ತ್ವಾ ತದಂತಃಪುರಮಾವಿವೇಶ ॥೦೬॥

 ತತ್ರಾಹೃತಾಸ್ತಾ ನರದೇವಕನ್ಯಕಾಃ ಕುಜೇನ ದೃಷ್ಟ್ವಾ ಹರಿಮಾತ್ಮಬಂಧುಮ್
 ಉತ್ಥಾಯ ಸದ್ಯೋ ಜಗೃಹುಃ ಪ್ರಹರ್ಷ ವ್ರೀಳಾನುರಾಗಪ್ರಹಿತಾವಲೋಕೈಃ ॥೦೭॥

 ಆಸಾಂ ಮುಹೂರ್ತ ಏಕಸ್ಮಿನ್ನಾನಾಗಾರೇಷು ಯೋಷಿತಾಮ್
 ಸವಿಧಿಂ ಜಗೃಹೇ ಪಾಣೀನ್ ಪುರುರೂಪಃ ಸ್ವಮಾಯಯಾ ॥೦೮॥

 ತಾಸ್ವಪತ್ಯಾನ್ಯಜನಯದಾತ್ಮತುಲ್ಯಾನಿ ಸರ್ವತಃ
 ಏಕೈಕಸ್ಯಾಂ ದಶದಶ ಪ್ರಕೃತೇರ್ವಿಬುಭೂಷಯಾ ॥೦೯॥

 ಕಾಲಮಾಗಧಸಾಲ್ವಾದೀನನೀಕೈ ರುಂಧತಃ ಪುರಮ್
ಅಜೀಘನತ್ಸ್ವಯಂ ದಿವ್ಯಂ ಸ್ವಪುಂಸಾಂ ತೇಜ ಆದಿಶನ್ ॥೧೦॥

ಶಂಬರಂ ವಿವಿದಂ ಬಾಣಂ ಮುರಂ ವಲ್ವಲಮೇವ ಚ
ಅನ್ಯಾಂಶ್ಚ ದಂತವಕ್ರಾದೀನವಧೀತ್ ಕಾಂಶ್ಚ ಘಾತಯತ್ ॥೧೧॥

 ಅಥ ತೇ ಭ್ರಾತೃಪುತ್ರಾಣಾಂ ಪಕ್ಷಯೋಃ ಪತಿತಾನ್ ನೃಪಾನ್
 ಚಚಾಲ ಭೂಃ ಕುರುಕ್ಷೇತ್ರಂ ಯೇಷಾಮಾಪತತಾಂ ಬಲೈಃ ॥೧೨॥

 ಸ ಕರ್ಣದುಃಶಾಸನಸೌಬಲಾನಾಂ ಕುಮಂತ್ರಪಾಕೇನ ಹತಶ್ರಿಯಾಯುಷಮ್
 ಸುಯೋಧನಂ ಸಾನುಚರಂ ಶಯಾನಂ ಭಗ್ನೋರುಮೂರ್ವ್ಯಾಂ ಸನ ನನಂದ ಪಶ್ಯನ್ ॥೧೩॥

 ಕಿಯಾನ ಭುವೋಽಯಂ ಕ್ಷಪಿತೋರುಭಾರೋ ಯದ್ ದ್ರೋಣಭೀಷ್ಮಾರ್ಜುನಭೀಮಶಲ್ಯೈಃ
 ಅಷ್ಟಾದಶಾಕ್ಷೋಹಿಣಿಕೋ ಮದಂಶೈರಾಸ್ತೇ ಬಲಂ ದುರ್ವಿಷಹಂ ಯದೂನಾಮ್ ॥೧೪॥

 ಮಿಥೋ ಯದೈಷಾಂ ಭವಿತಾ ವಿವಾದೋ ಮಧ್ವಾಮದಾತ್ ತಾಮ್ರವಿಲೋಚನಾನಾಮ್
 ನೈಷಾಂ ವಧೋಪಾಯ ಇಯಾನತೋಽನ್ಯೋ ಮಯ್ಯುದ್ಯತೇಽನ್ತರ್ದಧತೇ ಸ್ವಯಂ ಸ್ಮ ॥೧೫॥

 ಏವಂ ಸಂಚಿಂತ್ಯ ಭಗವಾನ್ ಸ್ವರಾಜ್ಯೇ ಸ್ಥಾಪ್ಯ ಧರ್ಮಜಮ್
 ನಂದಯಾಮಾಸ ಸುಹೃದಃ ಸಾಧೂನಾಂ ವರ್ತ್ಮ ದರ್ಶಯನ್ ॥೧೬॥

 ಉತ್ತರಾಯಾಂ ಧೃತಃ ಪೂರೋರ್ವಂಶಃ ಸಾಧ್ವಭಿಮನ್ಯುನಾ
 ಸ ವೈ ದ್ರೌಣ್ಯಸ್ತ್ರಸಂಛಿನ್ನಃ ಪುನರ್ಭಗವತಾ ಧೃತಃ ॥೧೭॥

 ಅಯಾಜಯದ್ ಧರ್ಮಸುತಮಶ್ವಮೇಧೈಸ್ತ್ರಿಭಿರ್ವಿಭುಃ
 ಸೋಽಪಿ ಕ್ಷ್ಮಾಮನುಜೈ ರಕ್ಷನ್ ರೇಮೇ ಕೃಷ್ಣಮನುವ್ರತಃ ॥೧೮॥

 ಭಗವಾನಪಿ ವಿಶ್ವಾತ್ಮಾ ಲೋಕವೇದಪಥಾನುಗಃ
 ಕಾಮಾನ್ ಸಿಷೇವೇ ದ್ವಾರ್ವತ್ಯಾಮಸಕ್ತಃ ಸಾಂಖ್ಯಮಾಸ್ಥಿತಃ ॥೧೯॥

 ಸ್ನಿಗ್ಧಸ್ಮಿತಾವಲೋಕೇನ ವಾಚಾ ಪೀಯೂಷತುಲ್ಯಯಾ
 ಚಾರಿತ್ರೇಣಾನವದ್ಯೇನ ಶ್ರೀನಿಕೇತೇನ ಚಾತ್ಮನಾ ॥೨೦॥

 ಇಮಂ ಲೋಕಮಮುಂ ಚೈವ ರಮಯನ್ ಸುತರಾಂ ಯದೂನ್
ರೇಮೇ ಕ್ಷಣದಯಾ ದತ್ತ ಕ್ಷಣಃಸ್ತ್ರೀಕ್ಷಣಸೌಹೃದಃ ॥೨೧॥

ತಸ್ಯೈವಂ ರಮಮಾಣಸ್ಯ ಸಂವತ್ಸರಗಣಾನ್ ಬಹೂನ್
ಗೃಹಮೇಧೇಷು ಯೋಗೇಷು ವಿರಾಗಃ ಸಮಜಾಯತ ॥೨೨॥

ದೈವಾಧೀನೇಷು ಕಾಮೇಷು ದೈವಾಧೀನಃ ಸ್ವಯಂ ಪುಮಾನ್
ಕೋ ವಿಸ್ರಂಭೇತ ಯೋಗೇನ ಯೋಗೇಶ್ವರಮನುವ್ರತಃ ॥೨೩॥

 ಪುರ್ಯಾಂ ಕದಾಚಿತ್ಕ್ರೀಡದ್ಭಿರ್ಯದುಭೋಜಕುಮಾರಕೈಃ
 ಕೋಪಿತಾ ಮುನಯಃ ಶೇಪುರ್ಭಗವನ್ಮತಕೋವಿದಾಃ ॥೨೪॥

 ತತಃ ಕತಿಪಯೈರ್ಮಾಸೈರ್ವೃಷ್ಣಿಭೋಜಾಂಧಕಾದಯಃ
 ಯಯುಃ ಪ್ರಭಾಸಂ ಸಂಹೃಷ್ಟಾ ರಥೈರ್ದೇವವಿಮೋಹಿತಾಃ ॥೨೫॥

 ತತ್ರ ಸ್ನಾತ್ವಾ ಪಿತೄನ್ ದೇವಾನ್ ಋಷೀಂಶ್ಚೈವ ತದಂಭಸಾ
 ತರ್ಪಯಿತ್ವಾಽಥ  ವಿಪ್ರೇಭ್ಯೋ ಗಾವೋ ಬಹುಗುಣಾ ದದುಃ ॥೨೬॥

 ಹಿರಣ್ಯಂ ರಜತಂ ಶಯ್ಯಾಂ ವಾಸಾಂಸ್ಯಜಿನಕಂಬಳಾನ್
 ಹಯಾನ್ ರಥಾನಿಭಾನ್ ಕನ್ಯಾ ಧರಾಂ ವೃತ್ತಿಕರೀಮಪಿ ॥೨೭॥

 ಅನ್ನಂ ಚೋರುರಸಂ ತೇಭ್ಯೋ ದತ್ತ್ವಾ ಭಗವದರ್ಪಣಮ್
 ಗೋವಿಪ್ರಾರ್ಥಾಸವಃ ಶೂರಾಃ ಪ್ರಣೇಮುರ್ಭುವಿ ಮೂರ್ಧಭಿಃ ॥೨೮॥

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ತೃತೀಯೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಮೂರನೇ ಅಧ್ಯಾಯ ಮುಗಿಯಿತು


*********

Wednesday, February 10, 2016

Shrimad BhAgavata in Kannada -Skandha-03-Ch-02(4)

ಮನ್ಯೇಽಸುರಾನ್ಭಾಗವತಾಂಸ್ತ್ರ್ಯಧೀಶೇ ಸಂರಂಭಮಾರ್ಗಾಭಿನಿವಿಷ್ಟಚಿತ್ತಾನ್ ।
ಯೇ ಸಂಯುಗೇಽಚಕ್ಷತ ತಾರ್ಕ್ಷ್ಯಪುತ್ರಸ್ಯಾಂಸೇ ಸುನಾಭಾಯುಧಮಾಪತಂತಮ್ ॥೨೪॥

ಕೇವಲ ಪೂತನಿಯಷ್ಟೇ ಅಲ್ಲ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಅಸುರರನ್ನೂ ಭಗವಂತ ಉದ್ಧಾರ ಮಾಡಿರುವುದನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುತ್ತಾನೆ. ಭಗವಂತ ನೋಡುವುದು ಜಾತಿಯನ್ನಲ್ಲ, ಬದಲಿಗೆ  ನಮ್ಮ ಸ್ವಭಾವವನ್ನು. ಸ್ವಭಾವ ಸಾತ್ವಿಕವಾಗಿದ್ದು, ಪ್ರಾರಾಬ್ದಕರ್ಮದಿಂದ ಅಥವಾ ಇನ್ನಾವುದೋ ಕಾರಣದಿಂದ  ಜೀವ ಅಸುರನಾಗಿದ್ದರೂ ಕೂಡಾ, ಅಂತಹ ಜೀವವನ್ನು ಭಗವಂತ ಉದ್ಧಾರ ಮಾಡುತ್ತಾನೆ.
ಇಲ್ಲಿ ಉದ್ಧವ ಭಗವಂತನನ್ನು ‘ತ್ರ್ಯಧೀಶ’ ಎಂದು ಸಂಬೋಧಿಸಿದ್ದಾನೆ. ಮೇಲಿನ-ನಡುವಿನ ಮತ್ತು ಕೆಳಗಿನ ಅಥವಾ ಭೂಃ, ಭುವಃ, ಸ್ವಃ  ಈ ಎಲ್ಲಾ ಲೋಕಗಳ(ಎಲ್ಲಾ ಹದಿನಾಲ್ಕು ಲೋಕಗಳ) ಮತ್ತು  ನಿತ್ಯಲೋಕಗಳಾದ ಶ್ವೇತದ್ವೀಪ, ವೈಕುಂಠ,  ಅನಂತಾಸನದ ಒಡೆಯನಾದ ಭಗವಂತ  ‘ತ್ರ್ಯಧೀಶ’. ರಾಜಸ-ತಾಮಸ-ಸಾತ್ವಿಕ ಜನರ ಒಡೆಯನಾದ ಭಗವಂತ ‘ತ್ರ್ಯಧೀಶ’.
“ಅಸುರನಾಗಿ ಹುಟ್ಟಿರಲಿ, ಋಷಿ ಪುತ್ರನಾಗಿ ಜನಿಸಿರಲಿ. ಅಲ್ಲಿ ಭಗವಂತ ನೋಡುವುದು ಜಾತಿ-ಧರ್ಮವನ್ನಲ್ಲ. ಭಗವಂತನ ಅನುಗ್ರಹವಿರುವುದು ಜೀವಸ್ವಭಾವಕ್ಕನುಗುಣವಾಗಿ”. ಈ ಮಾತನ್ನು ಬ್ರಹ್ಮಪುರಾಣ ಸ್ಪಷ್ಟವಾಗಿ ವಿವರಿಸಿರುವುದನ್ನು ನಾವು ಕಾಣಬಹುದು: ಅಸುರಾ ಅಪಿ ಯೇ ವಿಷ್ಣುಂ ಶಙ್ಕಚಕ್ರಗದಾಧರಮ್ । ಭಕ್ತಿಪೂರ್ವಮವೇಕ್ಷನ್ತೇ ಜ್ಞೇಯಾ ಭಾಗವತಾ ಇತಿ|| ವಿದ್ವಿಷನ್ತಿ ತು ಯೇ ವಿಷ್ಣುಮೃಷಿಪುತ್ರಾ ಅಪಿ ಸ್ಫುಟಮ್ । ಅಸುರಾಸ್ತೇಽಪಿ ವಿಜ್ಞೇಯಾ ಗಚ್ಛನ್ತಿ ಚ ಸದಾತಮಃ॥ ಜೀವದ್ವಯಸಮಾಯೋಗಾದ್ಧಿರಣ್ಯಕಮುಖಾಃ ಪರೇ । ಭಕ್ತಿದ್ವೇಷಯುತಾಶ್ಚಸ್ಯುರ್ಗತಿಸ್ತೇಷಾಂ ಯಥಾ ನಿಜಮ್ । ಕಂಸಪೂತನಿಕಾದ್ಯಾಶ್ಚ ಬಾನ್ಧವಾದಿಯುತಾ ಯತಃ । ಜೀವದ್ವಯಸಮಾಯೋಗಾದ್ಗತಿದ್ವಯಜಿಗೀಷವಃ । ಸರ್ವಥಾ ಭಕ್ತಿತೋ ಮುಕ್ತಿರ್ದ್ವೇಷಾತ್ತಮ ಉದೀರಿತಮ್ । ನಿಯಮಸ್ತ್ವನಯೋರ್ನಿತ್ಯಂ ಮೋಹಾಯಾನ್ಯವಚೋ ಭವೇತ್ ॥ ಯಾರು ಶಂಖ-ಚಕ್ರ-ಗದಾಧರನಾದ ಭಗವಂತನ ದರ್ಶನವನ್ನು ಪಡೆಯುತ್ತಾನೋ, ಆತನನ್ನು ಭಗವದ್ಭಕ್ತರೆಂದೇ ತಿಳಿಯಬೇಕು. ಭಗವಂತನನ್ನು ದ್ವೇಷಿಸುವವನು ಋಷಿಕುಮಾರನಾಗಿದ್ದರೂ ಕೂಡಾ, ಆತನನ್ನು ಅಸುರನೆಂದು ತಿಳಿಯಬೇಕು. ಜೀವದ್ವಯ ಸಮಾವೇಶದಿಂದ ಬಾಹ್ಯವಾಗಿ ದ್ವೇಷ ಮಾಡಿದರೂ ಕೂಡಾ, ಆ ದೇಹದೊಳಗಿನ ಸಾತ್ವಿಕ ಜೀವ ಸದಾ ಭಗವಂತನ ಅನುಗ್ರಹಕ್ಕೆ ಪಾತ್ರವಾಗಿರುತ್ತದೆ. [ಜೀವದ್ವಯ ಸಮಾವೇಶಕ್ಕೆ  ಉದಾಹರಣೆ: ಕಂಸ. ಆತನ ಶರೀರದಲ್ಲಿ  ಕಾಲನೇಮಿ ಎನ್ನುವ ಅಸುರ ಮತ್ತು ಭೃಗು ಎನ್ನುವ ಎರಡು ಜೀವಗಳ ಸಮಾವೇಶವಿತ್ತು. ಇದೇ ರೀತಿ, ಈ ಹಿಂದೆ ಹೇಳಿದಂತೆ: ಪೂತನಿ, ಹಿರಣ್ಯಕಶಿಪು-ಹಿರಣ್ಯಾಕ್ಷ, ಶಿಶುಪಾಲ-ದಂತವಕ್ರ, ರಾವಣ-ಕುಂಭಕರ್ಣ, ಇವರೆಲ್ಲರಲ್ಲೂ ಜೀವದ್ವಯ ಸಮಾವೇಶವಿತ್ತು]. ಹೀಗಾಗಿ ಅಂತರಂಗದಲ್ಲಿ ಭಕ್ತಿಯನ್ನಿಟ್ಟ ಜೀವ ಬಾಹ್ಯವಾಗಿ ಕೋಪದ ವಶವಾದರೂ ಕೂಡಾ, ಅಂತರಂಗದಲ್ಲಿ ಭಗವದ್ಭಕ್ತಿಯುಳ್ಳ ಆತ ಭಗವಂತನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ.
ವಿಷ್ಣುರೂಪದಲ್ಲಿ ಅಸುರ ಸಂಹಾರ ಮಾಡಿದ ಭಗವಂತನನ್ನು ನೆನಪಿಸಿಕೊಂಡ ಉದ್ಧವ ಇಲ್ಲಿ  ಲೋಕಕಲ್ಯಾಣಕ್ಕಾಗಿ ಮತ್ತು  ಭಕ್ತರ ಅಭೀಷ್ಟ ಸಿದ್ಧಿಗಾಗಿ ಶ್ರೀಕೃಷ್ಣನಾಡಿದ ಲೀಲಾ ನಾಟಕಗಳನ್ನು ನೆನಪಿಸಿಕೊಳ್ಳುತ್ತಾನೆ. ಚತುರ್ಮುಖನ ಪ್ರಾರ್ಥನೆಯಂತೆ ಭಗವಂತ ಶ್ರೀಕೃಷ್ಣನಾಗಿ ದೇವಕಿಯ ಗರ್ಭದಿಂದ ಅವತರಿಸಿದ. ಆದರೆ ಕಂಸನಿಗೆ ಹೆದರಿದ ವಸುದೇವ, ಹುಟ್ಟಿದ ಮಗುವನ್ನು ನಂದಗೋಪನ ಮನೆಯಲ್ಲಿ ಬಿಟ್ಟ. ನಂದಗೋಪನ ಮನೆಯಲ್ಲಿ ಶ್ರೀಕೃಷ್ಣ ಸುಮಾರು ಹನ್ನೊಂದು ವರ್ಷಗಳ ಕಾಲ ಒಬ್ಬ ಸಾಮಾನ್ಯ ಗೋವಳನಂತೆ ಬೆಳೆದ. ಈ ಸಮಯದಲ್ಲಿ  ಕಾಲಿಯನನ್ನು ಮರ್ದಿಸಿ ಗೋಪಾಲಕರನ್ನು ಶ್ರೀಕೃಷ್ಣ ಕಾಪಾಡಿದ. ಏಳು ವರ್ಷ ವಯಸ್ಸಿನ ಶ್ರೀಕೃಷ್ಣ ಗೋವರ್ಧನ ಗಿರಿಯನ್ನು ಆಟದ ಕೊಡೆಯಂತೆ ಏಳು ದಿನ ಎತ್ತಿ ಹಿಡಿದ. ತನ್ನ ವೇಣುನಾದದಿಂದ ಗೋಪ-ಗೋಪಿಕೆಯರನ್ನು ಶ್ರೀಕೃಷ್ಣ ಮರುಳು ಮಾಡಿದ. ಹೀಗೆ ಗೋವಳನಾಗಿ ಶ್ರೀಕೃಷ್ಣ ತೋರಿದ ಅನೇಕ ಲೀಲಾನಾಟಕಗಳನ್ನು ಇಲ್ಲಿ ಉದ್ಧವ ನೆನಪಿಸಿಕೊಳ್ಳುವುದನ್ನು ನಾವು ಕಾಣುತ್ತೇವೆ. [ಈ ಎಲ್ಲಾ ಲೀಲಾ ನಾಟಕಗಳ ವಿವರಣೆಯನ್ನು ನಾವು ಸಂಕ್ಷಿಪ್ತವಾಗಿ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ]

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು
*********


Monday, February 8, 2016

Shrimad BhAgavata in Kannada -Skandha-03-Ch-02(3)

ಅಹೋ ಬಕೀ ಯಂ ಸ್ತನಕಾಳಕೂಟಂ ಜಿಘಾಂಸಯಾಽಪಾಯಯದಪ್ಯಸಾಧ್ವೀ ।
ಲೇಭೇ ಗತಿಂ ಧಾತ್ರ್ಯುಚಿತಾಂ ತತೋಽನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ॥೨೩॥

ಶ್ರೀಕೃಷ್ಣ ಎಂತಹ  ಕರುಣಾಳು ಎನ್ನುವುದನ್ನು  ಉದ್ಧವ ಹಿಂದೆ ನಡೆದ ಕೆಲವು ಘಟನೆಗಳ ಉಲ್ಲೇಖದೊಂದಿಗೆ  ವಿವರಿಸುವುದನ್ನು ನಾವಿಲ್ಲಿ ಕಾಣುತ್ತೇವೆ. “ಶ್ರೀಕೃಷ್ಣ ಪುಟ್ಟ ಮಗುವಿದ್ದಾಗ ಪೂತನಿ(ಬಕೀ*) ಎನ್ನುವ ರಾಕ್ಷಸಿ  ಒಂದು ಸುಂದರ ಹೆಣ್ಣಿನ ರೂಪದಲ್ಲಿ, ದಾದಿಯಾಗಿ ಬಂದು, ಕೃಷ್ಣನಿಗೆ ವಿಷದ ಹಾಲನ್ನು ಉಣಿಸಿ ಸಾಯಿಸಲು ಪ್ರಯತ್ನಿಸಿರುತ್ತಾಳೆ. ಆದರೂ ಕೂಡಾ ಶ್ರೀಕೃಷ್ಣ ಆಕೆಯ ತಪ್ಪನ್ನು ಮನ್ನಿಸಿ, ಆಕೆಗೆ ಮಗುವಿನ ಸೇವೆ ಮಾಡಿದ ದಾದಿ ಯಾವ ಸದ್ಗತಿ ಪಡೆಯುತ್ತಾಳೋ ಅಂತಹ ಸದ್ಗತಿಯನ್ನು ಕರುಣಿಸಿದ” ಎಂದಿದ್ದಾನೆ ಉದ್ಧವ.
ಇಲ್ಲಿ ಓದುಗರಿಗೆ ಒಂದು ಪ್ರಶ್ನೆ ಬರಬಹುದು. ಅದೇನೆಂದರೆ: ರಾಕ್ಷಸಿಯಾಗಿದ್ದ ಪೂತನಿಗೆ ಶ್ರೀಕೃಷ್ಣ ಸದ್ಗತಿ ನೀಡಿದನೇ ಎನ್ನುವ ಪ್ರಶ್ನೆ.  ಆದರೆ ಈ ಹಿಂದೆ ಎರಡನೇ ಸ್ಕಂಧದಲ್ಲಿ ವಿವರಿಸಿದಂತೆ(೨-೭-೨೭): ಹಾಲನ್ನುಣಿಸಿದ ಸ್ತ್ರೀಯ ದೇಹದ ಒಳಗೆ ಪೂತನಿ ಎನ್ನುವ ರಾಕ್ಷಸೀ ಜೀವದ ಜೊತೆಗೆ, ಊರ್ವಶಿ ಎನ್ನುವ ಗಂಧರ್ವ ಸ್ತ್ರೀ ಶಾಪಗ್ರಸ್ತಳಾಗಿ ಸೇರಿಕೊಂಡಿದ್ದಳು. ಹೀಗಾಗಿ ಅದು ಏಕ ದೇಹದಲ್ಲಿ ಜೀವದ್ವಯರ ಸಮಾವೇಶವಾಗಿತ್ತು. ಆದರೆ ಶ್ರೀಕೃಷ್ಣ ಹೇಗೆ ಹಂಸ ಹಾಲನ್ನು ನೀರಿನಿಂದ ಬೇರ್ಪಡಿಸಬಲ್ಲುದೋ ಹಾಗೆ, ಪುಣ್ಯಜೀವಿಯಾದ ಊರ್ವಶಿಯನ್ನು ರಾಕ್ಷಸಿಯಾದ ಪೂತನಿಯಿಂದ ಬೇರ್ಪಡಿಸಿ, ಆಕೆಯಿಂದಾದ ಅಪರಾದಗಳನ್ನು ಮನ್ನಿಸಿ, ಆಕೆಗೆ ಸದ್ಗತಿಯನ್ನು ನೀಡುತ್ತಾನೆ.  “ಇಂತಹ ದಯಾಳುವಾದ ಶ್ರೀಕೃಷ್ಣನಲ್ಲಿ ನಾನು ಶರಣು ಹೋಗುತ್ತೇನೆ” ಎಂದಿದ್ದಾನೆ ಉದ್ಧವ.

[*ಭಾಗವತದಲ್ಲಿ ಪೂತನಿಯನ್ನು ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ  ಹೆಸರುಗಳಿಂದ ಕರೆಯುವುದನ್ನು ನಾವು ಕಾಣುತ್ತೇವೆ. ಮಗುವಿನ ಜೀವವನ್ನು ಹೀರಲು ಬಂದಿದ್ದ ಆಕೆಯನ್ನು ಇಲ್ಲಿ ಬಕೀ(ಕೊಕ್ಕರೆ} ಎಂದು ಕರೆದಿದ್ದಾರೆ. ಈ ಹಿಂದೆ ಅವಳನ್ನು ಉಲೂಪಿಕಾ ಎಂದು ಸಂಬೋಧಿಸಿರುವುದನ್ನು ನಾವು ಈಗಾಗಲೇ ಎರಡನೇ ಸ್ಕಂಧದಲ್ಲಿ ನೋಡಿದ್ದೇವೆ].

Sunday, February 7, 2016

Shrimad BhAgavata in Kannada -Skandha-03-Ch-02(2)

ಉದ್ಧವ ಉವಾಚ
 ಕೃಷ್ಣದ್ಯುಮಣಿ ನಿಮ್ಲೋಚೇ ಗೀರ್ಣೇಷ್ವಜಗರೇಣ ಹ ।
 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್ ॥೦೭॥

“ಕೃಷ್ಣನೆಂಬ ಸೂರ್ಯ ನಮ್ಮ ಪಾಲಿಗೆ ಮುಳುಗಲಿದ್ದಾನೆ. ಇದರಿಂದಾಗಿ ಈ ದೇಶಕ್ಕೆ ಕತ್ತಲು ಕವಿಯಲಿದೆ. ಯಾದವರು ತಮ್ಮ ಸೊಬಗನ್ನು ಕಳೆದುಕೊಂಡು ಮೃತ್ಯುವಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸಾವು ಎನ್ನುವ ಹೆಬ್ಬಾವು ಅವರ ಹಿಂಬದಿಯಿಂದ ಬಾಯಿ ತೆರೆದು ಕುಳಿತಿದೆ. ಅದು ಯಾವ ಕ್ಷಣಕ್ಕೂ  ಅವರನ್ನು ಕಬಳಿಸಬಹುದು.  ಹೀಗಿರುವಾಗ  ಅವರ ಕ್ಷೇಮ-ಸಮಾಚಾರವನ್ನು ಏನೆಂದು ವಿವರಿಸಲಿ?” ಎಂದು ದುಃಖಿತನಾಗಿ ಮಾತನಾಡುತ್ತಾನೆ ಉದ್ಧವ.

 ದುರ್ಭಗೋ ಬತ ಲೋಕೋಽಯಂ ಯದವೋ ನಿತರಾಮಪಿ ।
 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಂಭಸಿ ॥೦೮॥

 “ಶ್ರೀಕೃಷ್ಣನ ಸಮಕಾಲಿನವರಾಗಿ ಹುಟ್ಟಿದ ಇವರ ದೌರ್ಭಾಗ್ಯಕ್ಕೆ ಎಣೆಯಿಲ್ಲ. ಏಕೆಂದರೆ ತಮ್ಮ ಜೊತೆಗೆ ಅವತಾರ ರೂಪಿಯಾಗಿ ಭಗವಂತ ನಿಂತಿದ್ದಾನೆ ಎನ್ನುವ ಎಚ್ಚರ ಅವರಿಗಿಲ್ಲ. ಉಳಿದವರ ಮಾತೇಕೆ? ಶ್ರೀಕೃಷ್ಣನ ಬಂಧುಗಳಾಗಿರುವ ಯಾದವರಿಗೇ ಈ ಎಚ್ಚರವಿಲ್ಲ ಎನ್ನುವುದು ದುರಾದೃಷ್ಟಕರ. ಇವರೆಲ್ಲರೂ ಸಂಸಾರವೆಂಬ ನೀರಿನಲ್ಲಿ ಈಜುತ್ತಿರುವ ಮೀನುಗಳಂತೆ ಬದುಕುತ್ತಿದ್ದಾರೆ. ಹೇಗೆ ನೀರಿನಿಂದ ಮೀನು ಆಚೆ ಬಿದ್ದರೆ ಸಾಯುತ್ತದೋ, ಅದೇ ರೀತಿ ಸಂಸಾರವೇ ಸರ್ವಸ್ವ, ಅದರಿಂದಾಚೆಗೆ ಬದುಕಿಲ್ಲ ಎಂದು ಇವರು ಜೀವಿಸುತ್ತಿದ್ದಾರೆ. ತಮ್ಮನ್ನು ಸಂಸಾರ ಸಾಗರದಿಂದ ದಡ ಸೇರಿಸಬಲ್ಲ ಭಗವಂತ ಜೊತೆಗಿದ್ದರೂ ಕೂಡಾ, ಅದರ ಪರಿಜ್ಞಾನ ಅವರಿಗಿಲ್ಲ. ಇವರಿಗೆ ಶ್ರೀಕೃಷ್ಣನ ಜ್ಞಾನಾನಂದಮಯವಾದ ದೇಹವಾಗಲೀ, ಆತನ ಅನಂತ ಮಹಿಮೆಯಾಗಲೀ ತಿಳಿದಿಲ್ಲ. ಈ ರೀತಿ ಬದುಕುತ್ತಿರುವ ಜನಾಂಗದ ದೌರ್ಭಾಗ್ಯವನ್ನು ನೋಡಿ ನನಗೆ ದುಃಖವಾಗುತ್ತಿದೆ. ”  ಎಂದು ಉದ್ಧವ ತನ್ನ ಅಂತರಂಗದ ನೋವನ್ನು ವಿದುರನಲ್ಲಿ ಹಂಚಿಕೊಳ್ಳುತ್ತಾನೆ.

ಯದ್ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ ।
 ಕಾರ್ತ್ಸ್ನ್ಯೇನ ಚಾತ್ರೋಪಗತಂ ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ॥೧೩॥

ಶ್ರೀಕೃಷ್ಣನನ್ನು ಭಗವಂತನ ಅವತಾರ ಎಂದು ತಿಳಿಯದ ಜನರ ಕುರಿತು ಹೇಳುವಾಗ ಉದ್ಧವನಿಗೆ ರಾಜಸೂಯ ಯಜ್ಣದ ನೆನಪಾಗುತ್ತದೆ. ರಾಜಸೂಯ ಯಜ್ಞಕ್ಕೆ  ದೇವತೆಗಳು, ನಾರದಾದಿ ಋಷಿ-ಮುನಿಗಳು ಎಲ್ಲರೂ ಬಂದಿದ್ದರು. ಭಗವಂತನ ಮೂರು ರೂಪಗಳ ಸಮ್ಮುಖದಲ್ಲಿ(ಶ್ರೀಕೃಷ್ಣ, ಪರಶುರಾಮ ಮತ್ತು ವೇದವ್ಯಾಸ) ನಡೆದ ಅಪೂರ್ವ ಯಜ್ಞ ಅದಾಗಿತ್ತು. ಅಲ್ಲಿ ಶ್ರೀಕೃಷ್ಣ ಸೌಂದರ್ಯದ ಪ್ರತೀಕವಾಗಿ ಕುಳಿತಿದ್ದ[ ದ್ರೌಪದಿ ಆ ಕಾಲದ ಅತ್ಯಂತ ಸುಂದರ ಸ್ತ್ರೀಯಾಗಿದ್ದರೆ, ಶ್ರೀಕೃಷ್ಣ ಅತ್ಯಂತ ಸುಂದರ ಪುರುಷನಾಗಿದ್ದ] . ಆತನ ಸೌಂದರ್ಯವನ್ನು ಕಂಡವರು ತಮ್ಮ ಅಜ್ಞಾನದಿಂದ: “ ಇದು ಚತುರ್ಮುಖ ತನ್ನ ಎಲ್ಲಾ ಸೃಷ್ಟಿ ಕೌಶಲವನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಸೃಷ್ಟಿಸಿದ ರೂಪ” ಎಂದು ತಿಳಿದರೇ ಹೊರತು, ಅದು ಚತುರ್ಮುಖನನ್ನೇ ಸೃಷ್ಟಿಸಿದ ಜ್ಞಾನಾನಂದಮಯನಾದ ಭಗವಂತ ಎನ್ನುವುದನ್ನು ತಿಳಿಯಲಿಲ್ಲ. “ಅಲ್ಲಿ ನರೆದ ದೇವತೆಗಳೇ ಹೀಗೆ ತಪ್ಪಾಗಿ ತಿಳಿದಿರುವಾಗ*, ಇನ್ನು ಯಾದವರ ಪಾಡೇನು?” ಎಂದು ಪ್ರಶ್ನಿಸುತ್ತಾನೆ ಉದ್ಧವ. ಹೀಗೆ ಎಲ್ಲರೂ ಭಗವತನ ಜೊತೆಗೇ ಬದುಕಿದ್ದು, ಆತನ ಮಹಿಮೆಯನ್ನು ನೋಡಿಯೂ, ಆತ ಜ್ಞಾನಾನಂದಮಯನಾದ ಭಗವಂತ ಎನ್ನುವ ಅರಿವಿಲ್ಲದೆ ಬದುಕಿರುವುದು ಅವರ ದೌರ್ಭಾಗ್ಯ.    
[*ಅಪರೋಕ್ಷ ಜ್ಞಾನಿಗಳು ಎಂದರೆ ಭಗವಂತನನ್ನು ಜ್ಞಾನದಲ್ಲಿ ಕಂಡವರು ಅಷ್ಟೇ. ಇಂತಹ ಅಪರೋಕ್ಷ ಜ್ಞಾನಿಗಳೇ ಮುಂದೆ ದೇವಪದವಿಯನ್ನು ಅಲಂಕರಿಸಬಹುದು. ಹೀಗಾಗಿ, ಅಪರೋಕ್ಷ ಜ್ಞಾನಿಗಳಿಗೆ ಮತ್ತು ಎಲ್ಲಾ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರಬೇಕೆಂದೇನು ಇಲ್ಲ. ಬ್ರಹ್ಮ-ವಾಯುವನ್ನು ಬಿಟ್ಟರೆ ಇತರ ದೇವತೆಗಳಿಗೆ ಭಗವಂತನ ಅವತಾರದ ಪೂರ್ಣಜ್ಞಾನ ಇರುತ್ತದೆ ಎಂದು ಹೇಳಲಾಗದು. ಹೀಗಾಗಿ ರಾಜಸೂಯ ಯಜ್ಞಕ್ಕೆ ಆಗಮಿಸಿದ ದೇವತೆಗಳೂ ಶ್ರೀಕೃಷ್ಣನನ್ನು ಚತುರ್ಮುಖ ಸೃಷ್ಟಿಸಿದ ಒಂದು ರೂಪವೆಂದು ತಪ್ಪಾಗಿ ತಿಳಿದರು]
ಈ ಶ್ಲೋಕದಲ್ಲಿ ‘ಬತ’ ಎನ್ನುವ ಪದವನ್ನು ‘ಆಶ್ಚರ್ಯ’ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ತ್ರಿಲೋಕಸ್ಯಾಜ್ಞಾನಂ ಬತ ರಾಜಸೂಯ ಯಜ್ಞದಲ್ಲಿ ಪಾಲ್ಗೊಂಡಿದ್ದ ಮೂರು ಲೋಕದ ಬಹುತೇಕರು  ಭಗವಂತನ  ಜ್ಞಾನಾನಂದಮಯವಾದ ಶರೀರವನ್ನು ‘ಚತುರ್ಮುಖ ಸೃಷ್ಟಿಸಿದ ಭೌತಿಕ ಶರೀರ’ ಎಂದು ತಪ್ಪಾಗಿ ತಿಳಿದಿದ್ದು ಪರಮಾಶ್ಚರ್ಯ. ಸ್ಕಾಂದ ಪುರಾಣದಲ್ಲಿ ಹೇಳುವಂತೆ: ಆನನ್ದರೂಪಂ ದೃಷ್ಟ್ವಾಽಪಿ ಲೋಕೋ ಭೌತಿಕಮೇವ ತು । ಮನ್ಯತೇ ವಿಷ್ಣುರೂಪಂ ಚ ಅಹೋ ಭ್ರಾನ್ತಿರ್ಬಹುಸ್ಥಿತಾ ॥ ಅಲ್ಲಿ ಸೇರಿದ್ದ ಹೆಚ್ಚಿನವರಿಗೆ  ಈ ರೀತಿಯ ಭ್ರಾಂತಿ ಬಂದಿರುವುದು ಮಹದಾಶ್ಚರ್ಯ.
http://bhagavatainkannada.blogspot.in/

Saturday, February 6, 2016

Shrimad BhAgavata in Kannada -Skandha-03-Ch-02(1)


ವಿದುರ ಶ್ರೀಕೃಷ್ಣನ ಕುರಿತು ಕೇಳಿದಾಗ ಉದ್ಧವ ಗದ್ಗಿತನಾಗುತ್ತಾನೆ. ಶ್ರೀಕೃಷ್ಣನ ಪರಮ ಭಕ್ತನಾಗಿದ್ದ ಆತ  ಬಾಲ್ಯದಲ್ಲಿ ಶ್ರೀಕೃಷ್ಣನನ್ನು ಪೂಜಿಸುವುದನ್ನೇ ತನ್ನ ಆಟವಾಗಿಸಿಕೊಂಡಿದ್ದ. ಉದ್ಧವ ಅದೆಷ್ಟು ಉತ್ಕಟವಾಗಿ ಶ್ರೀಕೃಷ್ಣನನ್ನು ಪೂಜಿಸುತ್ತಿದ್ದ ಎಂದರೆ, ತಾಯಿ ಬೆಳಗಿನ ಉಪಹಾರಕ್ಕೆ ಕರೆದರೆ, ಪೂಜೆಯಾಗದೇ ಆತ ಬರುತ್ತಿರಲಿಲ್ಲ. ಇಂತಹ ಉದ್ಧವನಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ವಿಷಯವೊಂದು ತಿಳಿದಿತ್ತು. ಅದೇನೆಂದರೆ: “ತಾನು ಸಧ್ಯದಲ್ಲೇ ಅವತಾರ ಸಮಾಪ್ತಿ ಮಾಡುತ್ತಿದ್ದೇನೆ” ಎಂದು ಶ್ರೀಕೃಷ್ಣ ಉದ್ಧವ ಮತ್ತು ಮೈತ್ರೇಯರಿಗೆ ತಿಳಿಸಿದ್ದ.

ಸ ಮುಹೂರ್ತಮಭೂತ್ತೂಷ್ಣೀಂ ಕೃಷ್ಣಾಂಘ್ರಿಸುಧಯಾ ಭೃಶಮ್ ।
 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧು ನಿರ್ವೃತಃ ॥೦೪॥

ವಿದುರ “ಶ್ರೀಕೃಷ್ಣನ ಕುರಿತು ಹೇಳು” ಎಂದು ಕೇಳಿದಾಗ ಉದ್ಧವನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಆತನಿಗೆ ಭಗವಂತನ ಪಾದವೆಂಬ ಅಮೃತದ ಕಡಲು ನೆನಪಾಗುತ್ತದೆ. ಆತ ಆ ಅದಮ್ಯವಾದ ಅಮೃತ ಸಾಗರದಲ್ಲಿ ಮುಳುಗಿಬಿಡುತ್ತಾನೆ.

ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ ।
 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ॥೦೬॥


ಧ್ಯಾನಾಮೃತದಲ್ಲಿ  ಮುಳುಗಿದ್ದು, ನಿಧಾನವಾಗಿ ಮರಳಿ ವ್ಯವಹಾರ ಲೋಕಕ್ಕೆ ಇಳಿದು ಬಂದ ಉದ್ಧವ, ಕಣ್ಣೊರೆಸಿಕೊಂಡು ಕಿರುನಗುವಿನೊಂದಿಗೆ ವಿದುರನೊಂದಿಗೆ ಮಾತನಾಡುತ್ತಾನೆ.  [ಇವೆಲ್ಲವೂ ಭಾಗವತ ನಮ್ಮ ಮುಂದೆ ತೆರೆದಿಡುವ  ಅನುಭಾವದ ಅಭೂತಪೂರ್ವ ಅನುಭವಗಳ ವಿವರಣೆ]

Friday, February 5, 2016

Shrimad BhAgavata in Kannada (Shloka) Skandha-03 Chapter-02

ಅಥ ದ್ವಿತೀಯೋSಧ್ಯಾಯಃ

ಶ್ರೀಶುಕ ಉವಾಚ
ಇತಿ ಭಾಗವತಃ ಪೃಷ್ಟಃ ಕ್ಷತ್ತ್ರಾ ವಾರ್ತಾಂ ಪ್ರಿಯಾಶ್ರಯಾಮ್
ಪ್ರತಿವಕ್ತುಂ ನ ಚೋತ್ಸೇಹ ಔತ್ಕಂಠ್ಯಾತ್ಸ್ಮಾರಿತೇಶ್ವರಃ ೦೧

ಯಃ ಪಂಚಹಾಯನೋ ಮಾತ್ರಾ ಪ್ರಾತರಾಶಾಯ ಯಾಚಿತಃ
ನೈಚ್ಛತ್ ತದ್ ರಚಯನ್ಯಸ್ಯ ಸಪರ್ಯಾಂ ಬಾಲಲೀಲಯಾ ೦೨

 ಸ ಕಥಂ ಸೇವಯಾ ತಸ್ಯ ಕಾಲೇನ ಜರಸಂ ಗತಃ
 ಪೃಷ್ಟೋ ವಾರ್ತಾಂ ಪ್ರತಿಬ್ರೂಯಾದ್ಭರ್ತುಃ ಪಾದಾವನುಸ್ಮರನ್ ೦೩

 ಸ ಮುಹೂರ್ತಮಭೂತ್ತೂಷ್ಣೀಂ ಕೃಷ್ಣಾಂಘ್ರಿಸುಧಯಾ ಭೃಶಮ್
 ತೀವ್ರೇಣ ಭಕ್ತಿಯೋಗೇನ ನಿಮಗ್ನಃ ಸಾಧು ನಿರ್ವೃತಃ ೦೪

 ಪುಳಕೋದ್ಭಿನ್ನಸರ್ವಾಂಗೋ ಮುಂಚನ್ಮೀಲದ್ದೃಶಾಽಶ್ರು ಸಃ
 ಪೂರ್ಣಾರ್ಥೋ ಲಕ್ಷಿತಸ್ತೇನ ಸ್ನೇಹಪ್ರಸರಸಂಪ್ಲುತಃ ೦೫

 ಶನಕೈರ್ಭಗವಲ್ಲೋಕಾನ್ನೃಲೋಕಂ ಪುನರಾಗತಃ
 ವಿಮೃಜ್ಯ ನೇತ್ರೇ ವಿದುರಂ ಪ್ರತ್ಯಾಹೋದ್ಧವ ಉತ್ಸ್ಮಯನ್ ೦೬

 ಉದ್ಧವ ಉವಾಚ
 ಕೃಷ್ಣದ್ಯುಮಣಿ ನಿಮ್ಲೋಚೇ ಗೀರ್ಣೇಷ್ವಜಗರೇಣ ಹ
 ಕಿಂ ನು ನಃ ಕುಶಲಂ ಬ್ರೂಯಾಂ ಗತಶ್ರೀಷು ಯದುಷ್ವಹಮ್ ೦೭

 ದುರ್ಭಗೋ ಬತ ಲೋಕೋಽಯಂ ಯದವೋ ನಿತರಾಮಪಿ
 ಯೇ ಸಂವಸಂತೋ ನ ವಿದುರ್ಹರಿಂ ಮೀನಾ ಇವಾಂಭಸಿ ೦೮

 ಇಂಗಿತಜ್ಞಾಃ ಪುರುಪ್ರೌಢಾ ಏಕಾರಾಮಾಶ್ಚ ಸಾತ್ವತಾಃ
 ಸಾತ್ವತಾಮೃಷಭಂ ಸರ್ವೇ ಭೂತಾವಾಸಮಮಂಸತ ೦೯

 ದೇವಸ್ಯ ಮಾಯಯಾ ಸ್ಪೃಷ್ಟಾ ಯೇ ಚಾನ್ಯೇ ಅಸದಾಶ್ರಯಾಃ
 ಭ್ರಾಮ್ಯತೇ ಧೀರ್ನ ತದ್ವಾಕ್ಯೈರಾತ್ಮನ್ಯುಪ್ತಾತ್ಮನಾಂ ಹರೌ ೧೦

 ಪ್ರದರ್ಶ್ಯಾತಪ್ತತಪಸಾಮವಿತೃಪ್ತದೃಶಾಂ ನೃಣಾಮ್
 ಆದಾಯಾಂತರಧಾದ್ಯಸ್ತು ಸ್ವಬಿಂಬಂ ಲೋಕಲೋಚನಮ್ ೧೧

 ಯನ್ಮರ್ತ್ಯಲೀಲೌಪಯಿಕಂ ಸ್ವಯೋಗ ಮಾಯಾಬಲಂ ದರ್ಶಯತಾ ಗೃಹೀತಮ್
 ವಿಸ್ಮಾಪನಂ ಸ್ವಸ್ಯ ಚ ಸೌಭಗರ್ದ್ಧೇಃ ಪರಂ ಪದಂ ಭೂಷಣಭೂಷಣಾಂಗಮ್ ೧೨

 ಯದ್ಧರ್ಮಸೂನೋರ್ಬತ ರಾಜಸೂಯೇ ನಿರೀಕ್ಷ್ಯ ದೃಕ್ಸ್ವಸ್ತ್ಯಯನಂ ತ್ರಿಲೋಕಃ
 ಕಾರ್ತ್ಸ್ನ್ಯೇನ ಚಾತ್ರೋಪಗತಂ ವಿಧಾತುರರ್ವಾಕ್ಸೃತೌ ಕೌಶಲಮಿತ್ಯಮನ್ಯತ ೧೩

 ಯಸ್ಯಾನುರಾಗಪ್ಲುತಹಾಸರಾಸ ಲೀಲಾವಲೋಕಪ್ರತಿಲಬ್ಧಮಾನಾಃ
 ವ್ರಜಸ್ತ್ರಿಯೋ ದೃಗ್ಭಿರನುಪ್ರವೃತ್ತ ಧಿಯೋಽವತಸ್ಥುಃ ಕಿಲ ಕೃತ್ಯಶೇಷಾಃ ೧೪

 ಸ್ವಶಾಂತರೂಪೇಷ್ವಿತರಸ್ವರೂಪೈರಭ್ಯರ್ದ್ಯಮಾನೇಷ್ವನುಕಂಪಿತಾತ್ಮಾ
 ಪರಾವರೇಶೋ ಮಹದಂಶಯುಕ್ತೋ ಹ್ಯಜೋಽಪಿ ಜಾತೋ ಭಗವಾನ್ಯಥಾಗ್ನಿಃ ೧೫

 ಮಾಂ ಖೇದಯತ್ಯೇತದಜಸ್ಯ ಜನ್ಮ ವಿಡಂಬನಂ ಯದ್ವಸುದೇವಗೇಹೇ
 ವ್ರಜೇ ಚ ವಾಸೋಽರಿಭಯಾದಿವ ಸ್ವಯಂ ಪುರಾದ್ವ್ಯವಾತ್ಸೀದ್ಯದನಂತವೀರ್ಯಃ ೧೬

 ದುನೋತಿ ಚೇತಃ ಸ್ಮರತೋ ಮಮೈತದ್ಯದಾಹ ಪಾದಾವಭಿವಂದ್ಯ ಪಿತ್ರೋಃ
 ತಾತಾಂಬ ಕಂಸಾದುರುಕಂಪಿತಾನಾಂ ಪ್ರಸೀದತಂ ನೋಽಕೃತನಿಷ್ಕೃತೀನಾಮ್ ೧೭

 ಕೋ ವಾ ಅಮುಷ್ಯಾಂಘ್ರಿಸರೋಜರೇಣುಂ ವಿಸ್ಮರ್ತುಮೀಶೀತ ಪುಮಾನ್ವಿಜಿಘ್ರನ್
 ಯೋ ವಿಷ್ಫುರದ್ಭ್ರೂವಿಟಪೇನ ಭೂಮೇರ್ಭಾರಂ ಕೃತಾಂತೇನ ತಿರಶ್ಚಕಾರ ೧೮

 ದೃಷ್ಟಾ ಭವದ್ಭಿರ್ನನು ರಾಜಸೂಯೇ ಚೈದ್ಯಸ್ಯ ಕೃಷ್ಣಂ ದ್ವಿಷತೋಽಪಿ ಸಿದ್ಧಿಃ
 ಯಾಂ ಯೋಗಿನಃ ಸಂಸ್ಪೃಹಯಂತಿ ಸಮ್ಯಗ್ಯೋಗೇನ ಕಸ್ತದ್ವಿರಹಂ ಸಹೇತ ೧೯

 ತಥೈವ ಚಾನ್ಯೇ ನರಲೋಕವೀರಾ ಯ ಆಹವೇ ಕೃಷ್ಣಮುಖಾರವಿಂದಮ್
 ನೇತ್ರೈಃ ಪಿಬಂತೋ ನಯನಾಭಿರಾಮಂ ಪಾರ್ಥಾಸ್ತ್ರಪೂತಃ ಪದಮಾಪುರಸ್ಯ ೨೦

 ಸ್ವಯಂ ತ್ವಸಾಮ್ಯಾತಿಶಯಸ್ತ್ರ್ಯಧೀಶಃ ಸ್ವಾರಾಜ್ಯಲಕ್ಷ್ಮ್ಯಾಪ್ತಸಮಸ್ತಕಾಮಃ
 ಬಲಿಂ ಹರದ್ಭಿಃ ಸುರಲೋಕಪಾಲೈಃ ಕಿರೀಟಕೋಟ್ಯಾಹತಪಾದಪೀಠಃ ೨೧

 ತತ್ತಸ್ಯ ಕೈಂಕರ್ಯಮುಪಾಗತಾನ್ನೋ  ವಿಗ್ಲಾಪಯತ್ಯಂಗ ಯದುಗ್ರಸೇನಮ್
 ತಿಷ್ಠನ್ನಿಷಣ್ಣಂ ಪರಮೇಷ್ಠಿಧಿಷ್ಣ್ಯೇ ನ್ಯಬೋಧಯದ್ದೇವ ನಿಧಾರಯೇತಿ ೨೨

 ಅಹೋ ಬಕೀ ಯಂ ಸ್ತನಕಾಳಕೂಟಂ ಜಿಘಾಂಸಯಾಽಪಾಯಯದಪ್ಯಸಾಧ್ವೀ
 ಲೇಭೇ ಗತಿಂ ಧಾತ್ರ್ಯುಚಿತಾಂ ತತೋಽನ್ಯಂ ಕಂ ವಾ ದಯಾಳುಂ ಶರಣಂ ವ್ರಜೇಮ ೨೩

 ಮನ್ಯೇಽಸುರಾನ್ಭಾಗವತಾಂಸ್ತ್ರ್ಯಧೀಶೇ ಸಂರಂಭಮಾರ್ಗಾಭಿನಿವಿಷ್ಟಚಿತ್ತಾನ್
 ಯೇ ಸಂಯುಗೇಽಚಕ್ಷತ ತಾರ್ಕ್ಷ್ಯಪುತ್ರಸ್ಯಾಂಸೇ ಸುನಾಭಾಯುಧಮಾಪತಂತಮ್ ೨೪

 ವಸುದೇವಸ್ಯ ದೇವಕ್ಯಾಂ ಜಾತೋ ಭೋಜೇಂದ್ರಬಂಧನೇ
 ಚಿಕೀರ್ಷುರ್ಭಗವಾವಾಂಚ್ಛರ್ಮ ಅಬ್ಜಜೇನಾಭಿಯಾಚಿತಃ ೨೫

 ತತೋ ನಂದವ್ರಜಮಿತಃ ಪಿತ್ರಾ ಕಂಸಾದ್ವಿಬಿಭ್ಯತಾ
 ಏಕಾದಶ ಸಮಾಸ್ತತ್ರ ಗೂಢಾರ್ಚಿಃ ಸಬಲೋಽವಸತ್ ೨೬

 ಪರೀತೋ ವತ್ಸಪೈರ್ವತ್ಸಾಂಶ್ಚಾರಯನ್ವ್ಯಚರದ್ಧರಿಃ
 ಯಮುನೋಪವನೇ ಕೂಜದ್ ದ್ವಿಜಸಂಕುಲಿತಾಂಘ್ರಿಪೇ ೨೭

 ಕೌಮಾರಾ ದರ್ಶಯಂಶ್ಚೇಷ್ಟಾಃ ಪ್ರೇಕ್ಷಣೀಯಾ ವ್ರಜೌಕಸಾಮ್
 ರುದನ್ನಿವ ಹಸನ್ಮುಗ್ಧೋ ಬಾಲಸಿಂಹಾವಲೋಕನಃ ೨೮

 ಸ ಏವ ಗೋಧನಂ ಲಕ್ಷ್ಮ್ಯಾ ನಿಕೇತಂ ಸಿತಗೋವೃಷಂ
 ಚಾರಯನ್ನನುಗಾನ್ಗೋಪಾನ್ರಣದ್ವೇಣುರರೀರಮತ್  ೨೯

 ಪ್ರಯುಕ್ತಾನ್ಭೋಜರಾಜೇನ ಮಾಯಿನಃ ಕಾಮರೂಪಿಣಃ
 ಲೀಲಯಾ ವ್ಯನುದತ್ತಾಂಸ್ತಾನ್ಬಾಲಃ ಕ್ರೀಡನಕಾನಿವ ೩೦

 ವಿಪನ್ನಾನ್ವಿಷಪಾನೇನ ನಿಗೃಹ್ಯ ಭುಜಗಾಧಿಪಮ್
 ಉತ್ಥಾಪ್ಯಾಪಾಯಯದ್ಗಾವಸ್ತತ್ತೋಯಂ ಪ್ರಕೃತಿಸ್ಥಿತಮ್  ೩೧

 ಅಯಾಜಯದ್ಗೋಸವೇನ ಗೋಪರಾಜಂ ದ್ವಿಜೋತ್ತಮೈಃ
 ವಿತ್ತಸ್ಯ ಚೋರುಭಾರಸ್ಯ ಚಿಕೀರ್ಷನ್ಸದ್ವ್ಯಯಂ ವಿಭುಃ ೩೨

 ವರ್ಷತೀಂದ್ರೇ ವ್ರಜಃ ಕೋಪಾದ್ಭಗ್ನಮಾನೇಽತಿವಿಹ್ವಲೇ
 ಗೋತ್ರಲೀಲಾತಪತ್ರೇಣ ತ್ರಾತೋ ಭದ್ರಾನುಗೃಹ್ಣತಾ ೩೩

 ಶರಚ್ಛಶಿಕರೈರ್ಮೃಷ್ಟಂ ಮಾನಯನ್ರಜನೀಮುಖಮ್
 ಗಾಯನ್ಕಳಪದಂ ರೇಮೇ ಸ್ತ್ರೀಣಾಂ ಮಂಡಲಮಂಡನಃ ೩೪

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ದ್ವಿತೀಯೋSಧ್ಯಾಯಃ ॥
ಭಾಗವತ ಮಹಾಪುರಾಣದ ಮೂರನೇ  ಸ್ಕಂಧದ ಎರಡನೇ ಅಧ್ಯಾಯ ಮುಗಿಯಿತು


*********