ತಸ್ಯಾಂ ಸ ಚಾಮ್ಭೋರುಹಕರ್ಣಿಕಾಯಾಮವಸ್ಥಿತೋ ಲೋಕಮಪಶ್ಯಮಾನಃ ।
ಪರಿಕ್ರಮನ್ ವ್ಯೋಮ್ನಿ ವಿವೃತ್ತನೇತ್ರಶ್ಚತ್ವಾರಿ ಭೇಜೇSನುದಿಶಂ ಮುಖಾನಿ ॥ ೧೬॥
ತಸ್ಮಾದ್ ಯುಗಾನ್ತಶ್ವಸನಾವಘೂರ್ಣಮಹೋರ್ಮಿಚಕ್ರಾತ್ ಸಲಿಲಾದ್ ವಿರೂಢಮ್ ।
ಅಪಾಶ್ರಿತಃ ಕಞ್ಜಮು ಲೋಕತನ್ತ್ರಂ ನಾತ್ಮಾನಮದ್ಧಾSವಿದದಾದಿದೇವಃ ॥೧೭ ॥
ಬ್ರಹ್ಮಾಂಡವೆಂಬ ಕಮಲದ ಮೇಲೆ ಕುಳಿತ ಚತುರ್ಮುಖ ಎಲ್ಲಾ ಕಡೆ ನೋಡಿದ ಮತ್ತು ಆಗ ಏಕಕಾಲದಲ್ಲಿ ಎಲ್ಲಾ ಕಡೆ ನೋಡಬಲ್ಲ ನಾಲ್ಕು ಮುಖವನ್ನು ಪಡೆದ. ಆಗ ಜೋರಾಗಿ ಗಾಳಿ ಬೀಸಿ(ಕಂಪನದಿಂದ) ಪದ್ಮ ಅಲುಗಾಡಿತು ಮತ್ತು ಲೋಕವೆಂಬ ತಾವರೆಯ ಮೇಲೆ ಕುಳಿತ ಚತುರ್ಮುಖ ತಾನ್ಯಾರು ಎಂದು ತಿಳಿಯದೇ ಚಿಂತನೆಯನ್ನಾರಮ್ಭಿಸಿದ.
ಕ ಏಷ ಯೋSಸಾವಹಮಬ್ಜಪೃಷ್ಠ ಏತತ್ ಕುತೋ ವಾSಬ್ಜಮನನ್ಯದಪ್ಸು ।
ಅಸ್ತಿ ಹ್ಯಧಸ್ತಾದಿಹ ಕಿಞ್ಚಚನೈತದಧಿಷ್ಠಿತಂ ಯತ್ರ ಸತಾ ನು ಭಾವ್ಯಮ್ ॥೧೮ ॥
ಕಮಲದ ಮೇಲಿರುವ ನಾನು ಹುಟ್ಟಿರುವುದು ಹೇಗೆ? ಏನಿದು ಕಮಲ? ಇದು ಎಲ್ಲಿಂದ ಬಂತು? ಇದರಲ್ಲಿ ನಾನು ಹೇಗೆ ಬಂದೆ?, ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಾಣದ ಬ್ರಹ್ಮ ಒಂದು ತೀರ್ಮಾನಕ್ಕೆ ಬಂದ. ಈ ಅಘಾದವಾದ ನೀರು, ಅದರಲ್ಲಿ ಕಮಲ, ಇದೆಕ್ಕೆಲ್ಲವೂ ಒಂದು ಅಧಿಷ್ಠಾನ ಇರಲೇಬೇಕು ಮತ್ತು ಅದು ಭಗವಂತನೇ ಇರಬೇಕು ಎನ್ನುವ ತೀರ್ಮಾನ ಅವನದ್ದಾಗಿತ್ತು. ಹೀಗೆ ತೀರ್ಮಾನಿಸಿದ ಬ್ರಹ್ಮ ಪರಮಾತ್ಮನನ್ನು ಕಾಣಲು ನಾಭೀಕಮಲದಲ್ಲಿ ಕೆಳಕ್ಕೆ ಹೋದ. ಆದರೆ ಅಲ್ಲೂ ಅವನಿಗೆ ಏನೂ ಕಾಣಲಿಲ್ಲ. ಪುನಃ ಮೇಲೆ ಬಂದು, ಕಮಲದಲ್ಲಿ ಕುಳಿತು ತನ್ನ ಪೂರ್ವಜನ್ಮದ ಸಂಸ್ಕಾರದಿಂದ ಅಂತರಂಗದಲ್ಲಿ ಭಗವಂತನ ಧ್ಯಾನವನ್ನು ಮಾಡಲಾರಂಭಿಸಿದ. ಚತುರ್ಮುಖ ದೇವತೆಗಳ ೧೦೦ ವರ್ಷಗಳ ಕಾಲ ಅಂದರೆ ಮಾನವರ ೩೬,೦೦೦ ವರ್ಷಗಳ ಕಾಲ ಭಗವಂತನ ಧ್ಯಾನ ಮಾಡಿದ. ಈ ಸಮಯ ಬ್ರಹ್ಮನಿಗೆ ಕೇವಲ ಒಂದು ಕ್ಷಣವಷ್ಟೇ. ಆಗ ಶೇಷಶಾಯಿ ಭಗವಂತನ ದರ್ಶನ ಬ್ರಹ್ಮದೇವರಿಗೆ ಅವರ ಹೃದಯದಲ್ಲಾಯಿತು.
ಇಲ್ಲಿ ಪೂರ್ವ ಜನ್ಮದ ಸಂಸ್ಕಾರದಿಂದ ಚತುರ್ಮುಖ ಶ್ರೀಹರಿಯೇ ನನ್ನ ಜನಕ ಎನ್ನುವುದನ್ನು ಊಹಿಸಿದ್ದಾನೆ.
ಸತಾ ಬ್ರಹ್ಮಣಾ-
“ಸ ಬ್ರಹ್ಮಾSಚಿನ್ತಯತ್ ಕುತೋ ನು ಪದ್ಮಂ ಬ್ರಹ್ಮಣಃ ಸ್ಯಾದಿತಿ” ಇತಿ ಸೌಕರಾಯಣಶ್ರುತಿಃ ॥ * ॥
ಪದ್ಮ ಯಾರಿಂದ ಜನಿಸಿತು ಎಂದು ಆಲೋಚಿಸಿದ ಚತುರ್ಮುಖ, ಬಳಿಕ ಅದು ಭಗವಂತನಿಂದಲೇ ಜನಿಸಿರುವುದು ಎನ್ನುವ ತೀರ್ಮಾನಕ್ಕೆ ಬಂದ. ಆಗಷ್ಟೇ ಹುಟ್ಟಿದ ಮಗು ಪೂರ್ವಜನ್ಮದ ಸಂಸ್ಕಾರದಿಂದ ಹೇಗೆ ಮೊಲೆಹಾಲು ಕುಡಿಯಲು ತಿಳಿದಿರುತ್ತದೋ ಹಾಗೇ, ಇಲ್ಲಿ ಚತುರ್ಮುಖ ‘ಭಗವಂತನೇ ತನ್ನ ಜನಕ’ ಎನ್ನುವುದನ್ನು ತಾನೇ ತಿಳಿದ. ಆಗ ಅವನಿಗೆ ಭಗವಂತನ ದರ್ಶನವಾಯಿತು.
ಚತುರ್ಮುಖ ಕಂಡ ಪರಮಾತ್ಮನ ವರ್ಣನೆ
ಮೃಣಾಳಗೌರಾಯತಶೇಷಭೋಗಪರ್ಯಙ್ಕ ಏಕಂ ಪುರುಷಂ ಶಯಾನಮ್ ।
ಫಣಾಸಹಸ್ರಾಯುತಮೂರ್ಧರತ್ನದ್ಯುಭಿರ್ಹತಧ್ವಾನ್ತಯುಗಾನ್ತತೋಯೇ ॥ ೨೩ ॥
ಪ್ರೇಕ್ಷಂ ಕ್ಷಿಪನ್ತಂ ಹರಿತೋಪಲಾದ್ರೋಃ ಸನ್ಧ್ಯಾಭ್ರನೀವೇರುರುರುಗ್ಮಮೂರ್ಧ್ನಃ ।
ರತ್ನೋದಧೇರೋಷಧಿಸೌಮನಸ್ಯವನಸ್ರಜೋ ವೇಣುಭುಜಾಙ್ಘ್ರಿಪಾಙ್ಘ್ರೇಃ ॥ ೨೪ ॥
ಆಯಾಮತೋ ವಿಸ್ತರತಃ ಸಮಾನದೇಹೇನ ಲೋಕತ್ರಯಸಙ್ಗ್ರಹೇಣ ।
ವಿಚಿತ್ರದಿವ್ಯಾಭರಣಾಂಶುಕಾನಾಂ ಕೃತಶ್ರಿಯೋಪಾಶ್ರಿತದಿವ್ಯವೇಷಮ್ ॥ ೨೫ ॥
ಪುಂಸಾಂ ಸ್ವಕಾಮಾಯ ವಿವಿಕ್ತಮಾರ್ಗೈರಭ್ಯರ್ಚತಾಂ ಕಾಮದುಘಾಙ್ಘ್ರಿಪದ್ಮಮ್
ಪ್ರದರ್ಶಯನ್ತಂ ಕೃಪಯಾ ನಖೇಂದುಮಯೂಖಭಿನ್ನಾಙ್ಗುಲಿಚಾರುಪತ್ರಮ್ ॥ ೨೬ ॥
ಮುಖೇನ ಲೋಕಾರ್ತಿಹರಸ್ಮಿತೇನ ಪರಿಸ್ಫುರತ್ಕುಣ್ಡಲಮಣ್ಡಿತೇನ ।
ಶೋಣಾಯಿತೇನಾಧರಬಿಮ್ಬಭಾಸಾ ಪ್ರತ್ಯರ್ಹಯನ್ತಂ ಸುನಸೇನ ಸುಭ್ರ್ವಾ ॥ ೨೭ ॥
ಕದಮ್ಬಕಿಞ್ಜಲ್ಕಪಿಶಙ್ಗವಾಸಸಾ ಸ್ವಲಙ್ಕೃತಂ ಮೇಖಲಯಾ ನಿತಮ್ಬೇ ।
ಹಾರೇಣ ಚಾನನ್ತಧನೇನ ವತ್ಸ ಶ್ರೀವತ್ಸವಕ್ಷಃಸ್ಥಲವಲ್ಲಭೇನ ॥ ೨೮ ॥
ಪರಾರ್ಧ್ಯಕೇಯೂರಮಣಿಪ್ರವೇಕಪರ್ಯಸ್ತದೋರ್ದಣ್ಡಸಹಸ್ರಶಾಖಮ್ ।
ಅವ್ಯಕ್ತಮೂಲಂ ಭುವನಾಙ್ಘ್ರಿಪೇನ್ದ್ರಮಹೀನ್ದ್ರಭೋಗೈರಧಿವೀತವಲ್ಕಮ್ ॥ ೨೯ ॥
ಚರಾಚರೌಕೋ ಭಗವನ್ಮಹೀಧ್ರಮಹೀನ್ದ್ರಬನ್ಧುಂ ಸಲಿಲೋಪಗೂಢಮ್ ।
ಕಿರೀಟಸಾಹಸ್ರಹಿರಣ್ಯಶೃಙ್ಗಮಾವಿರ್ಭವತ್ಕೌಸ್ತುಭರತ್ನಗರ್ಭಮ್ ॥ ೩೦ ॥
ನಿವೀತಮಾಮ್ನಾಯಮಧುವ್ರತಾಶ್ರಯ ಸ್ವಕೀರ್ತಿಮಯ್ಯಾ ವನಮಾಲಯಾ ಹರಿಮ್ ।
ಸೂರ್ಯೇನ್ದುವಾಯ್ವಗ್ನ್ಯಗಮತ್ತ್ರಿಧಾಮಭಿಃ ಪರಿಕ್ರಮತ್ಪ್ರಾಧನಿಕೈರ್ದುರಾಸದಮ್ ॥ ೩೧ ॥
ತರ್ಹ್ಯೇವ ತನ್ನಾಭಿಸರಃಸರೋಜ ಆತ್ಮಾನಮಮ್ಭಃ ಶ್ವಸನಂ ವಿಯಚ್ಚ ।
ದದರ್ಶ ದೇವೋ ಜಗತಾಂ ವಿಧಾತಾ ನಾತಃ ಪರಂ ಲೋಕವಿಸರ್ಗದೃಷ್ಟಿಃ ॥ ೩೨ ॥
ಸ್ವಕರ್ಮಬೀಜಂ ರಜಸೋಪರಕ್ತಃ ಪ್ರಜಾಃ ಸಿಸೃಕ್ಷನ್ನಿಯದೇವ ದೃಷ್ಟ್ವಾ ।
ಅಸ್ತೌದ್ ವಿಸರ್ಗಾಭಿಮುಖಸ್ತಮೀಶ ಮವ್ಯಕ್ತವರ್ತ್ಮನ್ಯಭಿವೇಶಿತಾತ್ಮಾ ॥ ೩೩ ॥
ತಾವರೆಯಂತಹ, ಬಯಸಿದ್ದನ್ನು ಕೊಡುವ ಪಾದಕಮಲ, ಅಲ್ಲಿ ಬೆರಳುಗಳೇ ದಳಗಳು. ಉಗುರು ಎನ್ನುವ ಚಂದ್ರನಿಂದ ಹೊರಟ ಬೆಳದಿಂಗಳ ಕಿರಣಗಳಿಂದ ಅಂಗುಲಿಗಳು ವಿಲಕ್ಷಣವಾಗಿ ಕಾಣುತ್ತಿವೆ. [ಇಲ್ಲಿ ಭಿನ್ನ ಎಂದರೆ ವಿಲಕ್ಷಣ. ಭಗವಂತನ ಅಂಗ ಬೇರೆ, ಭಗವಂತ ಬೇರೆ ಅಲ್ಲ. ಭಿನ್ನಮನ್ಯೇಭ್ಯೋ ವಿಲಕ್ಷಣಮ್ ॥*॥] ಹೀಗೆ ಬೆಳ್ಳಗಿರುವ ಶೇಷನ ಮೈಯೆಂಬ ಮಂಚದಮೇಲೆ ಕುಳಿತ ಪರಮಾತ್ಮನ ಪಾದಪದ್ಮವೆಂಬ ಕಲ್ಪವೃಕ್ಷವನ್ನು ಚತುರ್ಮುಖ ಕಂಡ. ಶೇಷನ ಹೆಡೆಯನ್ನಲಂಕರಿಸಿದ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಕತ್ತಲನ್ನು ದೂರಮಾಡುವಾಗ ಚತುರ್ಮುಖನಿಗೆ ಭಗವಂತ ಕಂಡ. ಭಗವಂತ ನೀಲಿ ಬಣ್ಣದ ಬೆಟ್ಟದಂತೆ ಕಾಣುತ್ತಿದ್ದ. ಅವನು ಪೀತಾಮ್ಭಾರವನ್ನು ಧರಿಸಿದ್ದು, ಕಿರೀಟವನ್ನು ಧರಿಸಿದ್ದ. ಕೊರಳಲ್ಲಿ ವನಮಾಲೆಯನ್ನು ಧರಿಸಿದ್ದ. ಅವನು ಕೈ ಅಗಲಿಸಿದರೆ ಎಷ್ಟು ಅಗಲವಿದ್ದನೋ ಅಷ್ಟೇ ಅವನ ಎತ್ತರವಿತ್ತು. ಎಲ್ಲರೂ ಬೇರೆಬೇರೆ ರೀತಿಯಿಂದ ಅವನನ್ನು ಪೂಜಿಸುತ್ತಿದ್ದರು. ಶ್ರೀಲಕ್ಷ್ಮಿ ಅವನನ್ನು ಆಶ್ರಯಿಸಿಕೊಂಡಿದ್ದಳು. [ಇಲ್ಲಿ ಬಟ್ಟೆ , ಕಿರೀಟ.. ಅರಳಿದ ಹೂ, ಇತ್ಯಾದಿ ಎಲ್ಲವೂ ಅಲೌಕಿಕ ಎಂದು ತಿಳಿಯಬೇಕು.]
ತೋಳ್ಬಂಧಿ, ಶ್ರೇಷ್ಠವಾದ ಬಳೆಗಳಿಂದ ಅಲಂಕರಿಸಿದ ಸಹಸ್ರಾರು ತೊಳುಗಳು. ಕೊರಳಲ್ಲಿ ಧರಿಸಿದ್ದ ವನಮಾಲೆ ತುಂಬೆಲ್ಲಾ ದುಂಬಿಗಳು, (ಪ್ರಳಯಕಾಲದಲ್ಲಿ ವೇದಮಾತೆ ಶ್ರೀಲಕ್ಷ್ಮಿ ಭಗವಂತನನ್ನು ಸ್ತೋತ್ರಮಾಡುತ್ತಿರುವಂತೆ, ಮೋಕ್ಷದಲ್ಲಿರುವ ಮುಕ್ತಜೀವರು ಭಗವಂತನನ್ನು ಸದಾ ಭೃಂಗರೂಪದಲ್ಲಿ ಸ್ತೋತ್ರಮಾಡುತ್ತಿರುತ್ತಾರೆ.) ಹೀಗೆ ಶ್ವೇತದ್ವೀಪ, ಅನಂತಾಸನ ಮತ್ತು ವೈಕುಂಠಗಳೆಂಬ ಮೂರು ಮನೆಯುಳ್ಳ, ಎಂದೂ ಬಿಟ್ಟಿರದ ಮುಕ್ತರೊಂದಿಗಿರುವ ಭಗವಂತನನ್ನು ಚತುರ್ಮುಖ ಪಾದದಿಂದ ತಲೆಯತನಕ ನೋಡಿದ್ದಾನೆ. ಅಲ್ಲಿ ಹಿಂದಿನ ಕಲ್ಪದ(ಈಗಾಗಲೇ ಮೋಕ್ಷವನ್ನು ಸೇರಿರುವ) ಸೂರ್ಯನಿದ್ದ, ಚಂದ್ರ, ವಾಯು, ಪ್ರಾಣಾಗ್ನಿ, ಎಲ್ಲರೂ ಭಗವಂತನ ಪದಾತಿಗಳಾಗಿದ್ದರು.
ಮೈತ್ರೇಯರು ವಿದುರನನ್ನು ಕುರಿತು ಹೇಳುತ್ತಾರೆ: ಧ್ಯಾನ ಮಾಡುವವರ ಸಮಸ್ತ ಬೇಗೆಗಳನ್ನು ಪರಿಹರಿಸುವ ಕೆಂದುಟಿಯ ಮುಗುಳ್ನಗೆ ಭಗವಂತನ ಮುಖದಲ್ಲಿತ್ತು. ಕರ್ಣಕುಂಡಲದಿಂದ ಅಲಂಕೃತನಾದ ಭಗವಂತನ ತುಟಿ, ನಾಸಿಕ ಹಾಗು ಹುಬ್ಬು ಸೊಗಸಿನಿಂದ ಕಣ್ಣು ಕೋರೈಸುವಂತಿತ್ತು. ಭಗವಂತನ ನಡುವು ಕದಂಬಪುಷ್ಪದ ಕೇಸರವನ್ನು ಹೋಲುವ ಪೀತಾಂಬರದಿಂದ ಆವೃತವಾಗಿತ್ತು. ಅವನ ವಕ್ಷಸ್ಥಲ ಶ್ರೀವತ್ಸಚಿಹ್ನೆ ಮತ್ತು ಕಂಠೀಹಾರದಿಂದ ಅಲಂಕೃತವಾಗಿತ್ತು.
ಹೇಗೆ ಚಂದನ ವೃಕ್ಷವು ರೆಂಬೆಗಳಿಂದ, ಸುಗಂಧ ಪುಷ್ಪಗಳಿಂದ ಅಲಂಕೃತವಾಗಿರುತ್ತದೋ, ಹಾಗೇ ತೋಳ್ಬಂಧಿಗಳುಳ್ಳ ಸಾವಿರಾರು ತೋಳುಗಳಿಂದ ಕೂಡಿರುವ ಭಗವಂತನ ಶರೀರ ಅಲೌಕಿಕವಾದ ಮುತ್ತು-ರತ್ನಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು. ಚಂದನ ವೃಕ್ಷವು ಸರ್ಪಗಳಿಂದ ಆವೃತವಾಗಿರುವಂತೆಯೇ, ಭಗವಂತನ ಶರೀರ ಶೇಷನ ಹೆಡೆಗಳಿಂದ ಆಚ್ಛಾದಿತವಾಗಿತ್ತು. ಇಂತಹ ಭಗವಂತನು ಅವ್ಯಕ್ತಮೂಲ. ಅಂದರೆ ತ್ರಿಗುಣಾತ್ಮಕವಾದ ಪ್ರಕೃತಿಯ ಉತ್ಪತ್ತಿ ಕಾರಣ. [“ತಸ್ಮಾದವ್ಯಕ್ತಮುತ್ಪನ್ನಂ ತ್ರಿಗುಣಂ ದ್ವಿಜಸತ್ತಮ” -ಮೊಕ್ಷಧರ್ಮಪರ್ವ. ಪರಮಾತ್ಮನಿಂದ ತ್ರಿಗುಣಾತ್ಮಕವಾದ ಪ್ರಕೃತಿ ಸೃಷ್ಟಿಯಾಯಿತು ಎಂದು ಮೋಕ್ಷಧರ್ಮಪರ್ವದಲ್ಲಿ ಹೇಳಿದ್ದಾರೆ]
ಮಹಾಪರ್ವತದಂತೆ ಸಮಸ್ತ ಚರಾಚರ ಜೀವರಿಗೆ ನೆಲೆಯಾಗಿರುವ, ಸಾವಿರಾರು ಹೆಡೆಗಳ, ಸಾವಿರಾರು ಕಿರೀಟವನ್ನು ಧರಿಸಿರುವ ಶೇಷನ ಗೆಳೆಯನಾದ, ಆಘಾದವಾದ ಪರಮಾಣು ಸಮುದ್ರದಲ್ಲಿ ಮಲಗಿರುವ ಭಗವಂತನನ್ನು ನಾವು ಚಿಂತಿಸಬೇಕು.
ಈ ಹಿಂದೆ ಹೇಳಿದಂತೆ ತ್ರಿಧಾಮನಾದ ಭಗವಂತನನ್ನು ಬಿಟ್ಟು ಎಂದೂ ಬೇರೆಡೆ ಹೋಗದ, ಮುಕ್ತರಾಗಿರುವ ಸೂರ್ಯ, ಚಂದ್ರ, ಅಗ್ನಿ, ವಾಯು, ಮುಂತಾದವರು ಅಂಗರಕ್ಷಕರಂತೆ ಭಗವಂತನ ಸುತ್ತಲೂ ಸಂಚರಿಸುತ್ತಿರುತ್ತಾರೆ. ಸೂರ್ಯೇಂದುವಾಯ್ವಗ್ನ್ಯಾದಿಭಿಸ್ತ್ರಿದಾಧಾಮ್ನೋ ವಿಷ್ಟೋರಗಚ್ಛದ್ಭಿಃ ಪ್ರಾಧನಿಕೈಃ । ಈ ವಿವರಣೆಗೆ ಪೂರಕವಾಗಿ ಆಚಾರ್ಯರು ಬ್ರಹ್ಮಾಂಡ ಪುರಾಣದ ಪ್ರಮಾಣವಚನ ನೀಡಿರುವುದನ್ನು ನಾವು ಕಾಣಬಹುದು-
“ಮುಕ್ತವಾಯ್ವಾದಿಭಿರ್ವಿಷ್ಣುಂ ವೃತಂ ಬ್ರಹ್ಮಾ ದದರ್ಶ ಹ । ತದನ್ಯಾಭಾವತೋ ನಾನ್ಯದತಸ್ತತ್ ಸ್ರಷ್ಟುಮೈಚ್ಛತ”
ಇತಿ ಬ್ರಹ್ಮಾ ಣ್ಡೇ ॥ * ॥ ಚತುರ್ಮುಖ-ಬ್ರಹ್ಮ ಅಲ್ಲಿ ಮುಕ್ತರಾದ ವಾಯು ಮುಂತಾದವರನ್ನು ಕಂಡು, ಅದೇ ಮಾದರಿಯಲ್ಲಿ, ತನಗೆ ತಿಳಿಯದ ದಾರಿಯಲ್ಲಿ (ಪ್ರಕೃತಿಮಾತೆ ಶ್ರೀಲಕ್ಷಿಯಲ್ಲಿ) ತನ್ನ ಮನಸ್ಸನ್ನು ಇಟ್ಟು, ಸೃಷ್ಟಿ ಮಾಡಲು ತೊಡಗಿದ.
॥ ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ತೃತೀಯಸ್ಕಂಧೇ ನವಮೋSಧ್ಯಾಯಃ ॥
No comments:
Post a Comment