Sunday, September 29, 2013

Shrimad BhAgavata in Kannada -Skandha-02-Ch-01(1)

ದ್ವಿತೀಯ ಸ್ಕಂಧ

ಪ್ರಥಮೋSಧ್ಯಾಯಃ

ಓಂ ನಮೋ ಭಗವತೇ ವಾಸುದೇವಾಯ ಓಂ
॥ ಶ್ರೀ ಗುರುಭ್ಯೋ ನಮಃ ಹರಿಃ ಓಂ ॥

ಉತ್ತರ ಕೊಡುವಂತಹ ಸುಸಂಬದ್ಧ  ಪ್ರಶ್ನೆಯನ್ನು ಪ್ರಸಕ್ತ ಕಾಲದಲ್ಲಿ ಕೇಳಿದ ಪರೀಕ್ಷಿತ ರಾಜನನ್ನು ಶುಕಾಚಾರ್ಯರು  ಪ್ರಶಂಸಿಸುವುದರೊಂದಿಗೆ ಭಾಗತದ ಎರಡನೇ ಸ್ಕಂಧ ಆರಂಭವಾಗುತ್ತದೆ. 

ಶ್ರೀಶುಕ ಉವಾಚ--
ವರೀಯಾನೇಷ ತೇ ಪ್ರಶ್ನಃ ಕೃತೋ ಲೋಕಹಿತಂ ನೃಪ
ಆತ್ಮವಿತ್ಸಮ್ಮತಃ ಪುಂಸಾಂ ಶ್ರೋತವ್ಯಾದಿಷು ಯಃ ಪರಃ ೦೧

 “ಇಡೀ ಮಾನವ ಸಮುದಾಯಕ್ಕೆ ಅವಶ್ಯವಾದ ಪ್ರಶ್ನೆಯನ್ನು ನೀನು ಕೇಳಿದೆ. ಈ ಪ್ರಶ್ನೆ ಕೇವಲ ನಿನ್ನೊಬ್ಬನದಷ್ಟೇ ಅಲ್ಲ, ಇದು ಪ್ರತಿಯೊಬ್ಬ ಮನುಷ್ಯ ತಿಳಿಯಲೇ ಬೇಕಾದ ವಿಚಾರದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ದೊರಕಿದರೆ  ಇಡೀ ಮನುಕುಲದ ಸಮಸ್ಯೆಗೆ ಉತ್ತರ ಸಿಕ್ಕಂತಾಗುತ್ತದೆ. ‘ಮನುಷ್ಯ ಜೀವನದಲ್ಲಿ ಕೇಳಲೇಬೇಕಾದ ಸಂಗತಿ ಯಾವುದು’ ಎನ್ನುವ ನಿನ್ನ ಪ್ರಶ್ನೆ ಕೇವಲ ನನಗಷ್ಟೇ ಖುಷಿ ಕೊಡುವ ಪ್ರಶ್ನೆಯಲ್ಲ, ಇದು ಎಲ್ಲಾ ಆತ್ಮಜ್ಞಾನಿಗಳೂ ಮೆಚ್ಚುವ ಪ್ರಶ್ನೆ. ಇದು ಎಲ್ಲಾ ಅಜ್ಞಾನಿಗಳಿಗೂ ಉದ್ಧಾರದ ದಾರಿ ತೋರುವ ವಿಚಾರದ ಮೇಲಿನ ಪ್ರಶ್ನೆ. ನೀನು ಇಡೀ ಲೋಕಕ್ಕೆ ಕಲ್ಯಾಣಕರವಾಗುವಂತಹ ಪ್ರಶ್ನೆ ಮಾಡಿದೆಯಲ್ಲಾ, ತುಂಬಾ ಸಂತೋಷವಾಯಿತು” ಎಂದು ಪರೀಕ್ಷಿತ ರಾಜನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಶುಕಾಚಾರ್ಯರು.

ಶ್ರೋತವ್ಯಾನೀಹ ರಾಜೇಂದ್ರ ನೃಣಾಂ ಸಂತಿ ಸಹಸ್ರಶಃ
ಅಪಶ್ಯತಾಮಾತ್ಮತತ್ತ್ವಂ ಗೃಹೇಷು ಗೃಹಮೇಧಿನಾಂ೦೨

ನಿದ್ರಯಾ ಹ್ರಿಯತೇ ನಕ್ತಂ ವ್ಯವಾಯೇನ ನವಂ ವಯಃ
ದಿವಾ ಚಾರ್ಥೇಹಯಾ ರಾಜನ್ ಕುಟುಂಬಭರಣೇನ ವಾ೦೩
   
ಶುಕಾಚಾರ್ಯರು ಹೇಳುತ್ತಾರೆ: “ಇಂದು ಪ್ರಶ್ನೆ ಹಾಕುವವರೇ ಇಲ್ಲವಾಗಿದ್ದಾರೆ.  ಹೇಳಿದರೆ ಕೇಳುವವರೂ ಇಲ್ಲಾ. ಇಂತಹ ಸಮಯದಲ್ಲಿ ನೀನು ಕೇಳಬೇಕೆಂದು ಸಂಕಲ್ಪಿಸಿ ಕುಳಿತಿರುವುದು ಶ್ಲಾಘನೀಯ” ಎಂದು.
ಜೀವನದಲ್ಲಿ ಕೇಳಬೇಕಾದ ಸಂಗತಿ ಅನೇಕ. ಅದು ಏಳು ದಿನದಲ್ಲಲ್ಲ, ಏಳು ಜನ್ಮದಲ್ಲೂ ಮುಗಿಯದ ವಿಚಾರ. ದೇವಲೋಕದಲ್ಲಿ ದೇವೇಂದ್ರ  ಬೃಹಸ್ಪತಿಯಾಚಾರ್ಯರಿಂದ ಪಾಠ ಕೇಳಿದ ಪ್ರಸಂಗವನ್ನು ವಿವರಿಸುತ್ತಾ ಪತಂಜಲಿ ಹೇಳುತ್ತಾನೆ: “ಸಾವಿರ-ಸಾವಿರ ವರ್ಷಗಳ ಕಾಲ ಪಾಠ ಕೇಳಿದರೂ ಕಲಿತು ಮುಗಿಯಲಿಲ್ಲ” ಎಂದು. ಇದರರ್ಥ ಸಾವಿರ-ಸಾವಿರ  ವರ್ಷ ಕಲಿತರೂ ಮುಗಿಯದಷ್ಟು ಜ್ಞಾನವಿದೆ. ಆದರೆ ಇಂದು ಯಾರಿಗೂ ಈ ಅಪೂರ್ವವಾದ ವೇದಾಂತ ಬೇಡವಾಗಿದೆ. ಬಾಲ್ಯದಲ್ಲಿ ವೇದಾಂತ ಸಾಧ್ಯವಾಗಲಿಲ್ಲ, ಮುದಿತನದಲ್ಲಿ ಅಧ್ಯಯನಕ್ಕೆ ತ್ರಾಣವಿಲ್ಲ, ಇನ್ನು ಯೌವನದಲ್ಲಿ ಮನೆ, ಸಂಸಾರ, ಇತ್ಯಾದಿಯಲ್ಲಿ ಕಾಲ ಕಳೆದು ಹೋಗುತ್ತದೆ. ಲೌಕಿಕದಿಂದಾಚೆಗೆ ಅಧ್ಯಾತ್ಮವೆಂಬ ಒಂದು ಅಪೂರ್ವ ಮೌಲ್ಯ ಇದೆ ಎನ್ನುವ ಎಚ್ಚರವೇ ಇಂದಿನ ಜನರಿಗೆ ತಿಳಿದಿಲ್ಲ.  ಎಲ್ಲರೂ ಕೇವಲ ಐಹಿಕ ಜೀವನವೇ ಪುರುಷಾರ್ಥ ಎಂದು ತಿಳಿದು ಬದುಕುತ್ತಿದ್ದಾರೆ. ದೇಹದ ಪೋಷಣೆಯಿಂದಾಚೆಗೆ, ದೇಹದೊಳಗಿರುವ ಅನಾದಿ-ಅನಂತವಾಗಿರುವ  ನಿತ್ಯತತ್ತ್ವದ ಎಚ್ಚರ ಯಾರಿಗೂ ಇಲ್ಲಾ.
ಭಗವಂತನ ಬಗೆಗೆ ಎಚ್ಚರ ಇಲ್ಲದೇ ಬದುಕುತ್ತಿರುವ ಜನ ಹಗಲಿನಲ್ಲಿ ಹಣದ ಹಿಂದೆ ಓಡಿದರೆ, ರಾತ್ರಿಯನ್ನು ನಿದ್ದೆಯಲ್ಲೋ ಅಥವಾ ಲೈಂಗಿಕ ಸುಖದಲ್ಲೋ ಕಳೆಯುತ್ತಿರುತ್ತಾರೆ. ಇದನ್ನೇ ಕಾರಣವಾಗಿಟ್ಟುಕೊಂಡು ತಮ್ಮಲ್ಲಿ ವೇದಾಂತ ಚಿಂತನೆಗೆ ಸಮಯವಿಲ್ಲ ಎನ್ನುವವರಿದ್ದಾರೆ.  ಮನಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದರೆ ‘ಸಮಯವಿಲ್ಲ’ ಎನ್ನುವುದರ ಒಳಾರ್ಥ ‘ಮನಸ್ಸಿಲ್ಲ’ ಎಂದರ್ಥ.

ಗೇಹಾಪತ್ಯಕಳತ್ರಾದಿಷ್ವಾತ್ಮದೈನ್ಯೇಷ್ವಸತ್ಸ್ವಪಿ
ತೇಷು ಪ್ರಸಕ್ತೋ ನಿಧನಂ ಪಶ್ಯನ್ನಪಿ ನ ಪಶ್ಯತಿ೦೪

ತಸ್ಮಾದ್ ಭಾರತ ಸರ್ವಾತ್ಮಾ ಭಗವಾನ್ ಹರಿರೀಶ್ವರಃ
ಶ್ರೋತವ್ಯಃ ಕೀರ್ತಿತವ್ಯಶ್ಚ ಸ್ಮರ್ತವ್ಯಶ್ಚೇಚ್ಛತಾSಭಯಮ್ ೦೫

ಏತಾವಾನ್ ಸಾಂಖ್ಯಯೋಗಾಭ್ಯಾಂ ಸ್ವಧರ್ಮಪರಿನಿಷ್ಠಯಾ
ಜನ್ಮಲಾಭಃ ಪರಃ ಪುಂಸಾಮಂತೇ ನಾರಾಯಣಸ್ಮೃತಿಃ ೦೬

ನಾವು ವ್ಯಾವಹಾರಿಕ ವಿಚಾರಲ್ಲಿ ಇರಬಾರದು ಎಂದಲ್ಲ, ಆದರೆ ಅದರಲ್ಲೇ ಮುಳುಗುವುದು ತಪ್ಪು. ಇಂದು ಎಲ್ಲರೂ ಮನೆ, ಪತಿ, ಪತ್ನಿ, ಮಕ್ಕಳು ಇತ್ಯಾದಿ ವಿಚಾರದಲ್ಲೇ ಮುಳುಗಿ ಬಿಟ್ಟಿದ್ದಾರೆ.  ಇದರಿಂದಾಗಿ ಕೇವಲ ವ್ಯಕ್ತಿ ನಾಶವಷ್ಟೇ ಅಲ್ಲ, ವ್ಯಕ್ತಿತ್ತ್ವದ ಪತನವಾಗುತ್ತದೆ. ವ್ಯಾವಹಾರಿಕ ವಿಚಾರದಲ್ಲೇ ಮುಳುಗಿ ಅದರಿಂದ ವ್ಯಕ್ತಿತ್ತ್ವ ನಾಶವಾಗುವುದನ್ನು ಕಣ್ಣಾರೆ ಕಂಡರೂ ಸಹ, ಅದೇ ಸರ್ವಸ್ವ ಎಂದು ಕಣ್ಮುಚ್ಚಿ ಬದುಕುತ್ತಿದ್ದಾರೆ ಜನ. ಹೀಗಿರುವಾಗ ಆತ್ಮಜ್ಞಾನಿಗಳ ಸಮ್ಮುಖದಲ್ಲಿ ಪರೀಕ್ಷಿತ ‘ಕೇಳಬೇಕು’ ಎಂದು ಅಭಿಲಾಷೆ ವ್ಯಕ್ತಪಡಿಸಿರುವುದನ್ನು ಶುಕಾಚಾರ್ಯರು ಕೊಂಡಾಡುತ್ತಾರೆ.

ಮನುಷ್ಯನ ಬದುಕೇ ಭಯದ ಸರಮಾಲೆ. ‘ಭಗವಂತ ನಮ್ಮನ್ನು ರಕ್ಷಿಸುತ್ತಾನೆ’ ಎನ್ನುವ ಭರವಸೆ ಯಾರಿಗಿಲ್ಲವೋ, ಯಾರು ‘ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು’ ಎಂದು ತೀರ್ಮಾನಮಾಡಿ ಬದುಕುತ್ತಿರುತ್ತಾರೋ, ಅವರಿಗೆ ಭಯದಿಂದ ಪಾರಾಗುವ ದಾರಿಯೇ ಇಲ್ಲ.  “ನನಗೊಬ್ಬ ರಕ್ಷಕನಿದ್ದಾನೆ, ಅವನು ರಕ್ಷಿಸುವಷ್ಟು ಕಾಲ ನನಗೆ ಯಾರೂ ಏನನ್ನೂ ಮಾಡಲಾರರು, ಅವನು ಕೈಬಿಟ್ಟರೆ ಯಾರೂ ನನ್ನನ್ನು ರಕ್ಷಿಸಲಾರರು, ನನ್ನನ್ನು ರಕ್ಷಿಸುವ ಆ ಭಗವಂತ ರಕ್ಷಿಸಿಯೇ ರಕ್ಷಿಸುತ್ತಾನೆ” ಎನ್ನುವ ಪೂರ್ಣ ಭರವಸೆ ನಮ್ಮಲ್ಲಿದ್ದಾಗ  ಯಾವ ಭಯವೂ ಇಲ್ಲ. ಇದೊಂದೇ ಭಯದಿಂದ ಪಾರಾಗುವ ಉಪಾಯ. ಒಟ್ಟಿನಲ್ಲಿ ಹೇಳಬೇಕೆಂದರೆ: ನಮ್ಮ ಬದುಕಿನ ಹೊಣೆಯನ್ನು ನಾವೇ ಹೊತ್ತರೆ ಅದು ಭಯ; ವಿಶ್ವ ನಿಯಾಮಕ ಭಗವಂತ ಎಲ್ಲವನ್ನೂ ನೋಡುತ್ತಿದ್ದಾನೆ, ಅವನು ರಕ್ಷಿಸುತ್ತಿದ್ದಾನೆ ಎನ್ನುವ ಭಾವ ಧೈರ್ಯ. ಭಗವಂತನ ರಕ್ಷಣೆಯ ಹೊಣೆಯನ್ನು ನಂಬಿದವರಿಗೆ ಯಾವ ಪ್ರಸಂಗದಲ್ಲೂ ಭಯವಾಗುವುದಿಲ್ಲ. ಹೀಗಾಗಿ ಭಯಾತೀತನಾಗಲು ಇರುವ ಒಂದೇ ಒಂದು ದಾರಿ-ಭಗವಂತನ ಬಗೆಗಿನ ಎಚ್ಚರ.
ಮೇಲಿನ ಶ್ಲೋಕದಲ್ಲಿ ಭಗವಂತನನ್ನು ಸರ್ವಾತ್ಮಾ, ಹರಿಃ, ಈಶ್ವರ ಎಂದು ಸಂಬೋಧಿಸಿದ್ದಾರೆ.  ‘ಸರ್ವಾತ್ಮಾ’ ಎಂದರೆ ಎಲ್ಲರೊಳಗೂ ಇರುವವನು, ಎಲ್ಲರನ್ನೂ ಹೊತ್ತವನು ಎಂದರ್ಥ. ನನ್ನೊಳಗಿದ್ದು ನನ್ನನ್ನು ಭಗವಂತ  ರಕ್ಷಿಸುತ್ತಿರುವಾಗ ನನಗೇಕೆ ಭಯ ಎನ್ನುವ ಸಂಕಲ್ಪ ನಮ್ಮಲ್ಲಿದ್ದಾಗ, ಒಂದು ವೇಳೆ ನಾವು ದುರಂತಕ್ಕೊಳಗಾಗುವ ಪ್ರಸಂಗ ಬಂದರೂ ಕೂಡಾ, ಅದು ನಮಗೆ ಭಯಾನಕ ಎನಿಸುವುದಿಲ್ಲ.
ಇಲ್ಲಿ ‘ಈಶ್ವರ’ ಎಂದರೆ ಎಲ್ಲಾ ದೇವಾದಿ-ದೇವತೆಗಳಿಗೂ ಒಡೆಯನಾದ, ಸರ್ವಸಮರ್ಥ ಭಗವಂತ. ಅವನೇ ನಾರಾಯಣ. ಇದನ್ನೇ  ಶಂಕರಾಚಾರ್ಯರು ಈಶ್ವರಃ ಈಶನಶೀಲೋ ನಾರಾಯಣಃ ಎಂದು ವರ್ಣಿಸಿದ್ದಾರೆ. ಅಂತಹ ನಾರಾಯಣನಿಗೆ ನಾವು ಶರಣಾಗಬೇಕು.
ಸಂಸಾರ ದುಃಖವನ್ನು ಪರಿಹರಿಸಿ ನಮ್ಮನ್ನು ಸಂಸಾರದಿಂದ ಬಿಡುಗಡೆಗೊಳಿಸುವವನು ಹರಿಃ. ನಾವು ಭಕ್ತಿಯಿಂದ ಏನನ್ನು ಅರ್ಪಣೆ ಮಾಡಿದೆವೋ ಅದನ್ನು ಸ್ವೀಕರಿಸಿ ಅನಂತ ಫಲವನ್ನು ಕೊಡುವವನು ಹರಿಃ. ಇಂತಹ ಭಗವಂತನ ಅರಿವೇ ಜೀವನದ ಸಾರ್ಥಕ್ಯ. ನಾವು ತಿಳಿಯಬೇಕಾಗಿರುವುದು, ಕೇಳಬೇಕಾಗಿರುವುದು ಮತ್ತು ಧ್ಯಾನಿಸಬೇಕಾಗಿರುವುದು ಭಗವಂತನನ್ನು. ಹೀಗಾಗಿ ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿಯಬಹುದೋ ಅಂತಹ ಭಗವಂತನನ್ನು ನಿರಂತರ ತಿಳಿಯುವ ಪ್ರಯತ್ನವೇ ಜೀವನದ ಅತಿದೊಡ್ಡ ಸಾಧನೆ.
ಈ ಹಿಂದೆ ಹೇಳಿದಂತೆ ಮನುಷ್ಯ ಸಾಯುವ ಕ್ಷಣದಲ್ಲಿ ಯಾವುದನ್ನು ಉತ್ಕಟವಾಗಿ ನೆನೆಯುತ್ತಾನೋ, ಅದನ್ನೇ ಮುಂದಿನ ಜನ್ಮದಲ್ಲಿ ಪಡೆಯುತ್ತಾನೆ. ಹೀಗಾಗಿ ಪ್ರಾಣೋತ್ಕ್ರಮಣ ಕಾಲದಲ್ಲಿ  ಭಗವಂತನನ್ನು ನೆನೆದವನು ಮುಂದೆ ಭಗವಂತನನ್ನು ಸೇರುತ್ತಾನೆ. ಆದರೆ ಇದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ಜನ್ಮ-ಜನ್ಮಾಂತರದ ಸಾಧನೆ ಅಗತ್ಯ. ಕೆಲವೊಮ್ಮೆ ಇಡೀ ಜೀವಮಾನವೆಲ್ಲಾ ಭಗವಂತನ ಸ್ಮರಣೆ ಮಾಡಿದರೂ ಕೂಡಾ, ಸಾಯುವ ಕ್ಷಣದಲ್ಲಿ ಭಗವಂತನ ಸ್ಮರಣೆ ಬಾರದೇ ಹೋಗಬಹುದು. ಜೀವನದ ಪರಮ ಸೌಭಾಗ್ಯ ಎಂದರೆ ಕೊನೇ ಕ್ಷಣದಲ್ಲಿ ನಾರಾಯಣ ಸ್ಮೃತಿ ಬರುವುದು. ಅಂತಹ ಎಚ್ಚರವನ್ನು, ಸಾವಿನ ಕೊನೇ ಕ್ಷಣದಲ್ಲಿ ಮನಸ್ಸನ್ನು ಹೇಗೆ ಧ್ಯಾನಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಧ್ಯಾನ ಪ್ರಕ್ರಿಯೆಯನ್ನು ಶುಕಾಚಾರ್ಯರು ಪರೀಕ್ಷಿತನಿಗೆ ಉಪದೇಶಿಸುವುದನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕಾಣಬಹುದು.   

ಪ್ರಾಯೇಣ ಮುನಯೋ ರಾಜನ್ ನಿವೃತ್ತಾ ವಿಧಿನಿಷೇಧತಃ
ನೈರ್ಗುಣ್ಯಸ್ಥಾ ರಮಂತೇ ಸ್ಮ ಗುಣಾನುಕಥನೇ ಹರೇಃ ೦೭

ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಂ
ಅಧೀತವಾನ್ ದ್ವಾಪರಾದೌ ಪಿತುರ್ದ್ವೈಪಾಯನಾದಹಮ್ ೦೮


“ಶಾಸ್ತ್ರಗಳನ್ನು ಮನನಮಾಡಿ ಎಲ್ಲಾ ವಿಧಿ ನಿಷೇಧವನ್ನು ಮೀರಿ ನಿಂತ ಅಪರೋಕ್ಷ ಜ್ಞಾನಿಗಳೂ ಕೂಡಾ ಸದಾ ಹರಿಯ ಗುಣಗಾನವನ್ನು, ಭಗವಂತನ ಕಥಾನುಶ್ರವಣವನ್ನು ಬಯಸುತ್ತಾರೆ. ಹೀಗಾಗಿ ಈ ಸಂದರ್ಭದಲ್ಲಿ ನಾನು ನಿನಗೆ  ನನ್ನ ತಂದೆ ವೇದವ್ಯಾಸರು ಉಪದೇಶಿಸಿರುವ,  ಅಷ್ಠಾದಶಪುರಾಣಗಳಲ್ಲಿ ಅತ್ಯಂತ ಶ್ರೇಷ್ಠವೆನಿಸಿರುವ, ಪುರಾಣಗಳ ಸಾರಭೂತವಾದ ಭಾಗವತವನ್ನು ಹೇಳುತ್ತೇನೆ”   ಎನ್ನುತ್ತಾರೆ.     

Saturday, September 21, 2013

Shrimad BhAgavata in Kannada (Text): Skandha-02 Chapter-10

ಅಥ ದಶಮೋSಧ್ಯಾಯಃ


ಶ್ರೀಶುಕ ಉವಾಚ--
ಅತ್ರ ಸರ್ಗೋ ವಿಸರ್ಗಶ್ಚ ಸ್ಥಾನಂ ಪೋಷಣಮೂತಯಃ
ಮನ್ವಂತರೇಶಾನುಕಥಾ ನಿರೋಧೋ ಮುಕ್ತಿರಾಶ್ರಯಃ  ೦೧

ದಶಮಸ್ಯ ವಿಶುದ್ಧ್ಯರ್ಥಂ ನವಾನಾಮಿಹ ಲಕ್ಷಣಮ್
ವರ್ಣಯಂತಿ ಮಹಾತ್ಮಾನಃ ಶ್ರುತೇನಾರ್ಥೇನ ಚಾಂಜಸಾ ೦೨

ಭೂತಮಾತ್ರೇಂದ್ರಿಯಧಿಯಾಂ ಜನ್ಮ ಸರ್ಗ ಉದಾಹೃತಃ
ಬ್ರಹ್ಮಣೋ ಗುಣವೈಷಮ್ಯಾದ್ ವಿಸರ್ಗಃ ಪೌರುಷಃ ಸ್ಮೃತಃ ೦೩

ಸ್ಥಿತಿರ್ವೈಕುಂಠವಿಜಯಃ ಪೋಷಣಂ ತದನುಗ್ರಹಃ
ಮನ್ವಂತರಾಣಿ ಸದ್ಧರ್ಮಾ ಊತಯಃ ಕರ್ಮವಾಸನಾಃ ೦೪

ಅವತಾರಾನುಚರಿತಂ ಹರೇಶ್ಚಾಸ್ಯಾನುವರ್ತಿನಾಮ್
ಪುಂಸಾಮೀಶಕಥಾಃ ಪ್ರೋಕ್ತಾ ನಾನಾಖ್ಯಾನೋಪಬೃಂಹಿತಾ ೦೫

ನಿರೋಧೋSಸ್ಯಾನುಶಯನಮಾತ್ಮನಃ ಸಹ ಶಕ್ತಿಭಿಃ
ಮುಕ್ತಿರ್ಹಿತ್ವಾSನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ ೦೬

ಆಭಾಸಶ್ಚ ನಿರೋಧಶ್ಚ ಯತಸ್ತತ್ ತ್ರಯಮೀಯತೇ
ಸ ಆಶ್ರಯಃ ಪರಂ ಬ್ರಹ್ಮ ಪರಮಾತ್ಮೇತಿ ಶಬ್ದ್ಯತೇ ೦೭

ಆಧ್ಯಾತ್ಮಿಕೋ ಯಃ ಪುರುಷಃ ಸೋSಸಾವೇವಾಧಿದೈವಿಕಃ
ಯಸ್ತತ್ರೋಭಯವಿಚ್ಛೇದಃ ಸ ಸ್ಮೃತೋ ಹ್ಯಾಧಿಭೌತಿಕಃ ೦೮

ಏತದೇಕತಮಾಭಾವೇ ಯದಾ ನೋಪಲಭಾಮಹೇ
ತ್ರಿತಯಂ ತತ್ರ ಯೋ ವೇದ ಸ ಆತ್ಮಾ ಸ್ವಾಶ್ರಯಾಶ್ರಯಃ ೦೯


ಪುರುಷೋSಣ್ಡಂ ವಿನಿರ್ಭಿದ್ಯ ಯದಾಸೌ ಸ ವಿನಿರ್ಗತಃ
ಆತ್ಮನೋSಯನಮನ್ವಿಚ್ಛನ್ನಪೋSಸ್ರಾಕ್ಷೀಚ್ಛುಚಿಃ ಶುಚೀಃ ೧೦

ತಾಸ್ವವಾತ್ಸೀತ್  ಸ್ವಸೃಷ್ಟಾಸು ಸಹಸ್ರಪರಿವತ್ಸರಾನ್
ತೇನ ನಾರಾಯಣೋ ನಾಮ ಯದಾಪಃ ಪುರುಷೋದ್ಭವಾಃ ೧೧

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ
ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ೧೨

ಏಕೋ ನಾನಾತ್ವಮನ್ವಿಚ್ಛನ್ ಯೋಗತಲ್ಪಾತ್ ಸಮುತ್ಥಿತಃ
ವೀರ್ಯಂ ಹಿರಣ್ಮಯಂ ದೇವೋ ಮಾಯಯಾ ವ್ಯಸೃಜತ್ ತ್ರಿಧಾ ೧೩

ಅಧಿದೈವಮಥಾಧ್ಯಾತ್ಮಮಧಿಭೂತಮಿತಿ ಪ್ರಭುಃ
ಪುನಸ್ತತ್ ಪೌರುಷಂ ವೀರ್ಯಂ ತ್ರಿಧಾSಭಿದ್ಯತ ತಚ್ಛೃಣು ೧೪

ಅಂತಃ ಶರೀರ ಆಕಾಶೇ ಪುರುಷಸ್ಯ ವಿಚೇಷ್ಟತಃ
ಓಜಃ ಸಹೋ ಬಲಂ ಜಜ್ಞೇ ತತಃ ಪ್ರಾಣೋ ಮಹಾನಭೂತ್ ೧೫

ಅನುಪ್ರಾಣಂತಿ ಯಂ ಪ್ರಾಣಾಃ ಪ್ರಾಣಂತಂ ಸರ್ವಜಂತುಷು
ಅಪಾನಂತಮಪಾನಂತಿ ನರದೇವಮಿವಾನುಗಾಃ ೧೬

ಪ್ರಾಣೇನ ಕ್ಷಿಪತಾ ಕ್ಷುತ್ತೃಡಂತರಾ ಜಾಯತೇ ವಿಭೋಃ
ಪಿಪಾಸತೋ ಜಕ್ಷತಶ್ಚ ಪ್ರಾಙ್ಮುಖಂ ನಿರಭಿದ್ಯತ ೧೭

ಮುಖತಸ್ತಾಲು ನಿರ್ಭಿಣ್ಣಂ ಜಿಹ್ವಾ ತತ್ರೋಪಜಾಯತೇ
ತತೋ ನಾನಾರಸೋ ಜಜ್ಞೇ ಜಿಹ್ವಯಾ ಯೋಽಧಿಗಮ್ಯತೇ ೧೮

ವಿವಕ್ಷೋರ್ಮುಖತೋ ಭೂಮ್ನೋ ವಹ್ನಿರ್ವಾಗ್ ವ್ಯಾಹೃತಂ ತಯೋಃ
ಜಲೇ ವೈ ತಸ್ಯ ಸುಚಿರಂ ನಿರೋಧಃ ಸಮಜಾಯತ ೧೯

ನಾಸಿಕೇ ನಿರಭಿದ್ಯೇತಾಂ ದೋಧೂಯತಿ ನಭಸ್ವತಿ
ತತ್ರ ವಾಯುರ್ಗಂಧವಹೋ ಘ್ರಾಣೋ ನಸಿ ಜಿಘೃಕ್ಷತಃ ೨೦

ಯದಾತ್ಮನಿ ನಿರಾಲೋಕ ಆತ್ಮಾನಂ ಚ ದಿದೃಕ್ಷತಃ
ನಿರ್ಭಿಣ್ಣೇ  ಅಕ್ಷಿಣೀ ತಸ್ಯ ಜ್ಯೋತಿಶ್ಚಕ್ಷುರ್ಗುಣಗ್ರಹಃ ೨೧

ಬೋಧ್ಯಮಾನಸ್ಯ ಋಷಿಭಿರಾತ್ಮನಸ್ತಜ್ಜಿಘೃಕ್ಷತಃ
ಕರ್ಣೌ ಚ ನಿರಭಿದ್ಯೇತಾಂ ದಿಶಃ ಶ್ರೋತ್ರಂ ಗುಣಗ್ರಹಃ ೨೨

ವಸ್ತುನೋ ಮೃದುಕಾಠಿನ್ಯ ಲಘುಗುರ್ವೋಷ್ಣಶೀತತಾಮ್
ಜಿಘೃಕ್ಷತಸ್ತ್ವಙ್ ನಿರ್ಭಿಣ್ಣಾ ತಸ್ಯಾಂ ರೋಮಮಹೀರುಹಾಃ
ತತ್ರ ಚಾಂತರ್ಬಹಿರ್ವಾತಸ್ತ್ವಚಾ ಲಬ್ಧಗುಣಾವೃತಃ ೨೩

ಹಸ್ತೌ ರುರುಹತುಸ್ತಸ್ಯ ನಾನಾಕರ್ಮಚಿಕೀರ್ಷಯಾ
ತಯೋಸ್ತು ಬಲವಾನಿಂದ್ರ ಆದಾನಮುಭಯಾಶ್ರಯಮ್ ೨೪

ಗತಿಂ ಚಿಕೀರ್ಷತಃ ಪಾದೌ ರುರುಹಾತೇSಭಿಕಾಮತಃ
ಪದ್ಭ್ಯಾಂ ಯಜ್ಞಃ ಸ್ವಯಂ ಹವ್ಯಂ ಕರ್ಮ ಯತ್  ಕ್ರಿಯತೇ ನೃಭಿಃ ೨೫

ನಿರಭಿದ್ಯತ ಶಿಶ್ನೋ ವೈ ಪ್ರಜಾನಂದಾಮೃತಾರ್ಥಿನಃ
ಉಪಸ್ಥ ಆಸೀತ್ ಕಾಮಾನಾಂ ಪ್ರಿಯಂ ತದುಭಯಾಶ್ರಯಮ್ ೨೬

ಉತ್ಸಿಸೃಕ್ಷೋರ್ಧಾತುಮಲಂ ನಿರಭಿದ್ಯತ ವೈ ಗುದಮ್
ತತಃ ಪಾಯುಸ್ತತೋ ಮಿತ್ರ ಉತ್ಸರ್ಗ ಉಭಯಾಶ್ರಯಃ ೨೭

ಆಸಿಸೃಕ್ಷೋ ಪುರಃ ಪುರ್ಯಾಂ ನಾಭಿದ್ವಾರಮಪಾವೃತಮ್  
ತತೋ ಪಾನಸ್ತತೋ ಮೃತ್ಯುಃ ಪೃಥಕ್ತ್ವಮುಭಯಾಶ್ರಯಮ್ ೨೮

ಆದಿತ್ಸೋರನ್ನಪಾನಾನಾಂ ಅಸೃಕ್ ಕುಕ್ಷ್ಯಂತ್ರನಾಡಿಕೇ
ನದ್ಯಃ ಸಮುದ್ರಾಶ್ಚ ತಯೋಸ್ತೃಪ್ತಿಃ ಪುಷ್ಟಿಸ್ತದಾಶ್ರಯೇ ೨೯

ನಿದಿಧ್ಯಾಸೋರಾತ್ಮಮಾಯಾಂ ಹೃದಯಂ ನಿರಭಿದ್ಯತ
ತತೋ ಮನಶ್ಚಂದ್ರ ಇತಿ ಸಂಕಲ್ಪಃ ಕಾಮ ಏವ ಚ ೩೦


ತ್ವಕ್ಚರ್ಮಮಾಂಸರುಧಿರ ಮೇದೋಮಜ್ಜಾಸ್ಥಿಧಾತವಃ
ಭೂಮ್ಯಪ್ತೇಜೋಮಯಾಃ ಸಪ್ತ ಪ್ರಾಣೋ ವ್ಯೋಮಾಂಬುವಾಯುಭಿಃ ೩೧

ಗುಣಾತ್ಮಕಾನೀಂದ್ರಿಯಾಣಿ ಭೂತಾದಿಪ್ರಭವಾ ಗುಣಾಃ
ಮನಃ ಸರ್ವವಿಕಾರಾತ್ಮಾ ಬುದ್ಧಿರ್ವಿಜ್ಞಾನರೂಪಿಣೀ ೩೨

ಏತದ್ ಭಗವತೋ ರೂಪಂ ಸ್ಥೂಲಂ ತೇ ವ್ಯಾಹೃತಂ ಮಯಾ
ಮಹ್ಯಾದಿಭಿಶ್ಚಾವರಣೈರಷ್ಟಭಿರ್ಬಹಿರಾವೃತಮ್ ೩೩

ಅತಃ ಪರಂ ಸೂಕ್ಷ್ಮತಮಮವ್ಯಕ್ತಂ ನಿರ್ವಿಶೇಷಣಮ್
ಅನಾದಿಮಧ್ಯನಿಧನಂ ನಿತ್ಯಂ ವಾಙ್ಮನಸೋಃ ಪರಮ್ ೩೪

ಅಮುನೀ ಭಗವದ್ರೂಪೇ ಮಯಾ ತೇ ಹ್ಯನುವರ್ಣಿತೇ
ಉಭೇ ಅಪಿ ನ ಗೃಹ್ಣಂತಿ ಮಾಯಾಸೃSಷ್ಟೇ ವಿಪಶ್ಚಿತಃ ೩೫

ಸ ವಾಚ್ಯವಾಚಕತಯಾ ಭಗವಾನ್ ಬ್ರಹ್ಮರೂಪಧೃಕ್
ನಾಮರೂಪಕ್ರಿಯಾ ಧತ್ತೇ ಸಕರ್ಮಾಕರ್ಮಕಃ ಪರಃ ೩೬

ಪ್ರಜಾಪತೀನ್ ಮನೂನ್ ದೇವಾನೃಷೀನ್ ಪಿತೃಗಣಾನ್ ಪ್ರಥಕ್
ಸಿದ್ಧಚಾರಣಗಂಧರ್ವಾನ್ ವಿದ್ಯಾಧ್ರಾಸುರಗುಹ್ಯಕಾನ್ ೩೭

ಕಿನ್ನರಾಪ್ಸರಸೋ ನಾಗಾನ್ ಸರ್ಪಾನ್ ಕಿಂಪುರುಷಾನಪಿ
ಮಾತೃರಕ್ಷಃಪಿಶಾಚಾಂಶ್ಚ ಪ್ರೇತಭೂತವಿನಾಯಕಾನ್ ೩೮

ಕೂಷ್ಮಾಂಡೋನ್ಮಾದವೇತಾಳಾನ್ ಯತುಧಾನಾನ್ ಗ್ರಹಾನಪಿ
ಖಗಾನ್  ಮೃಗಾನ್ ಪಶೂನ್ ವೃಕ್ಷಾನ್ ಗಿರೀನ್ ನೃಪ ಸರೀಸೃಪಾನ್ ೩೯

ವಿವಿಧಾಶ್ಚತುರ್ವಿಧಾ ಯೇಽನ್ಯೇ ಜಲಸ್ಥಲನಭೌಕಸಃ
ಕುಶಲಾಕುಶಲಮಿಶ್ರಾಣಾಂ ಕರ್ಮಣಾಂ ಗತಯಸ್ತ್ವಿಮಾಃ ೪೦

ಸತ್ತ್ವಂ ರಜಸ್ತಮ ಇತಿ ತಿಸ್ರಃ ಸುರನೃನಾರಕಾಃ
ತತ್ರಾಪ್ಯೇಕೈಕಶೋ ರಾಜನ್ ಭಿದ್ಯಂತೇ ಗತಯಸ್ತ್ರಿಧಾ ೪೧

ಯದೈವ್ಯೆಕತಮೋSನ್ಯಾಭ್ಯಾಂ ಸ್ವಭಾವ ಉಪಹನ್ಯತೇ
ತದೈವೇದಂ ಜಗದ್  ಧಾತಾ ಭಗವಾನ್ ಧರ್ಮರೂಪಧೃಕ್  
ಪುಷ್ಣಾತಿ ಸ್ಥಾಪಯನ್ ವಿಶ್ವಂ ತಿರ್ಯಙ್ನರಸುರಾದಿಭಿಃ ೪೨

ತತಃ ಕಾಲಾಗ್ನಿರುದ್ರಾತ್ಮಾ ಯತ್ ಸೃಷ್ಟಮಿದಮಾತ್ಮನಃ
ಸನ್ನಿಯಚ್ಛತಿ ತತ್ ಕಾಲೇ ಘನಾನೀಕಮಿವಾನಿಲಃ ೪೩

ಇತ್ಥಂಭಾವೇನ ಕಥಿತೋ ಭಗವಾನ್ ಭಗವತ್ತಮಃ
ನೇತ್ಥಂಭಾವೇನ ಹಿ ಪರಂ ದ್ರಷ್ಟುಮರ್ಹಂತಿ ಸೂರಯಃ ೪೪

ನ ಚಾಸ್ಯ ಜನ್ಮಕರ್ಮಾಣಿ ಪರಸ್ಯ ನವಿಧೀಯತೇ
ಕರ್ತೃತ್ವಪ್ರತಿಷೇಧಾರ್ಥಂ ಮಾಯಯಾSರೋಪಿತಂ ಹಿ ತತ್ ೪೫

ಅಯಂ ತೇ  ಬ್ರಹ್ಮಣಃ ಕಲ್ಪಃ ಸವಿಕಲ್ಪ ಉದಾಹೃತಃ
ವಿಧಿಃ ಸಾಧಾರಣೋ ಯತ್ರ ಸರ್ಗಾಃ ಪ್ರಾಕೃತವೈಕೃತಾಃ ೪೬

ಪರಿಮಾಣಂ ಚ ಕಾಲಸ್ಯ ಕಲ್ಪಲಕ್ಷಣವಿಗ್ರಹಮ್
ಯಥಾ ಪುರಸ್ತಾದ್ ವ್ಯಾಖ್ಯಾಸ್ಯೇ ಪಾದ್ಮಂ ಕಲ್ಪಮಿಮಂ ಶೃಣು ೪೭

ಶೌನಕ ಉವಾಚ--
ಯದಾಹ ನೋ ಭವಾನ್ ಸೂತ ಕ್ಷತ್ತಾ ಭಾಗವತೋತ್ತಮಃ  
ಚಚಾರ ತೀರ್ಥಾನಿ ಭುವಸ್ತ್ಯಕ್ತ್ವಾ ಬಂಧೂನ್ ಸುದುಸ್ತ್ಯಜಾನ್ ೪೮

ಕುತ್ರ ಕೌಶಾರವೇಸ್ತಸ್ಯ ಸಂವಾದೋSಧ್ಯಾತ್ಮಸಂಭವಃ
ಯದ್ವಾ ಸ ಭಗವಾಂಸ್ತಸ್ಮೈ ಪೃಷ್ಟಸ್ತತ್ತ್ವಮುವಾಚ ಹ ೪೯

ಬ್ರೂಹಿ ನಸ್ತದಿದಂ ಸೌಮ್ಯ ವಿದುರಸ್ಯ ವಿಚೇಷ್ಟಿತಮ್
ಬಂಧುತ್ಯಾಗನಿಮಿತ್ತಂ ಚ ಯಥೈವಾಗತವಾನ್ ಪುನಃ ೫೦

ಸೂತ ಉವಾಚ--
ರಾಜ್ಞಾ ಪರೀಕ್ಷಿತಾ ಪೃಷ್ಟೋ ಯದವಾದೀನ್ಮಹಾಮುನಿಃ
ತದ್ವೋSಭಿಧಾಸ್ಯೇ ಶೃಣುತ ರಾಜ್ಞಃ ಪ್ರಶ್ನಾನುಸಾರತಃ ೫೧

ಇತಿ ಶ್ರೀಮದ್ಭಾಗವತೇ ಮಹಾ ಪುರಾಣೇ ಪ್ರಥಮಸ್ಕಂಧೇ ದಶಮೋSಧ್ಯಾಯಃ
ಭಾಗವತ ಮಹಾ ಪುರಾಣದ ಮೊದಲ ಸ್ಕಂಧದ ಹತ್ತನೇ ಅಧ್ಯಾಯ ಮುಗಿಯಿತು.
ಸಮಾಪ್ತಶ್ಚ ದ್ವಿತೀಯಸ್ಕಂಧಃ

*********